ಯೂಕ್ರೇನಿಗೆ 18 ಬಿಲಿಯನ್​ ಯೂರೊಗಳನ್ನು ನೀಡಲಿದೆ ಯುರೋಪಿಯನ್​ ಒಕ್ಕೂಟ; ಯುದ್ಧ ನಿಲ್ಲೋದು ಯಾವಾಗ?

EU
Published on

ಬೆಲ್ಜಿಯಂ: ಯುರೋಪಿಯನ್ ಕಮಿಷನ್ ಬುಧವಾರ ಯೂಕ್ರೇನ್‌ಗೆ ಭಾರಿ ಹಣಕಾಸಿನ ನೆರವನ್ನು ನೀಡಲು ಮುಂದಾಗಿದೆ.

ಯುರೋಪಿಯನ್​ ಒಕ್ಕೂಟ 18 ಬಿಲಿಯನ್​ ಯೂರೊದ ಬೆಂಬಲ ಪ್ಯಾಕೇಜ್ ಪ್ರಸ್ತಾಪಿಸಿದೆ. ಇದು 2023ರ ವರೆಗೆ ನಿಯಮಿತ ಕಂತುಗಳಲ್ಲಿ ಸಾಲ ರೂಪದಲ್ಲಿ ನೀಡಲಾಗುತ್ತದೆ. ಈ ಸ್ಥಿರ, ನಿಯಮಿತ ಹಣಕಾಸಿನ ನೆರವು (ತಿಂಗಳಿಗೆ ಸರಾಸರಿ 1.5 ಬಿಲಿಯನ್​ ಯೂರೊ) 2023ರವರೆಗೆ ಯೂಕ್ರೇನ್‌ನ ಅಲ್ಪಾವಧಿ ಅಗತ್ಯಗಳನ್ನು ಸರಿದೂಗಿಸಲು ಸಹಾಯ ಮಾಡಲಿದೆ.

ಈ ಪ್ಯಾಕೇಜ್‌ನೊಂದಿಗೆ, EU ಯು ಉಕ್ರೇನ್‌ಗೆ ವೇತನ ಮತ್ತು ಪಿಂಚಣಿಗಳನ್ನು ಪಾವತಿಸಲು, ಮುಚ್ಚಿರುವ ಆಸ್ಪತ್ರೆಗಳನ್ನು ಮತ್ತೇ ಪ್ರಾರಂಭಿಸಲು, ಶಾಲೆಗಳನ್ನು ನಿರ್ವಹಿಸಲು ಮತ್ತು ಸ್ಥಳಾಂತರಗೊಂಡ ಜನರಿಗೆ ವಸತಿಗಳಂತಹ ಅಗತ್ಯ ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಲು ಸಹಾಯ ಮಾಡಲಿದೆ ಎನ್ನಲಾಗುತ್ತಿದೆ. ಆದರೆ ಯುದ್ಧ ನಿಲ್ಲುವ ಸೂಚನೆಯೇ ಇರದ ಪರಿಸ್ಥಿತಿಯಲ್ಲಿ ಈ ಹಣವನ್ನು ಯೂಕ್ರೇನ್​ ಹೇಗೆ ಮರು ಪಾವತಿ ಮಾಡಲಿದೆ ಎನ್ನುವುದೇ ಯಕ್ಷ ಪ್ರಶ್ನೆ

ಇದು ಉಕ್ರೇನ್‌ನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಲು ಮತ್ತು ಇಂಧನ ಮೂಲಸೌಕರ್ಯ, ನೀರಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ರಸ್ತೆಗಳು ಮತ್ತು ಸೇತುವೆಗಳಂತಹ ಮೂಲಸೌಕರ್ಯಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡಲಿದೆ ಎನ್ನಲಾಗುತ್ತಿದೆ. ಆದರೆ ಈ ಸಾಲವನ್ನು ಯೂಕ್ರೇನ್​ ಯಾವಾಗ ಮರು ಪಾವತಿಸಲು ಶುರು ಮಾಡುತ್ತದೆ ಎನ್ನುವುದೇ ಯಕ್ಷ ಪ್ರಶ್ನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net