ಅಂಫಾನ್​ ಚಂಡಮಾರುತದಿಂದ ಹಾನಿಗೊಳದ ಪ್ರದೇಶಗಳ ನೆರವಿಗೆ ಯುರೋಪಿಯನ್​ ಒಕ್ಕೂಟದಿಂದ ಆರ್ಥಿಕ ನೆರವು

amfan-1
Published on

ನವದೆಹಲಿ: ಅಂಫಾನ್​ ಚಂಡಮಾರುತದಿಂದ ತತ್ತರಿಸಿರುವ ಪ್ರದೇಶಗಳ ನೆರವಿಗೆ ಯುರೋಪಿಯನ್​ ಒಕ್ಕೂಟ ಸಹಾಯ ಹಸ್ತ ಚಾಚಿದೆ.

ಚಂಡ ಮಾರುತದಿಂದ ತೀವ್ರ ಹಾನಿಯಾಗಿರುವ ಪ್ರದೇಶಗಳಿಗೆ 5,45,000 ಡಾಲರ್​ ನೆರವನ್ನು ಒಕ್ಕೂಟ ಘೋಷಿಸಿದೆ. ಚಂಡಮಾರತದಿಂದ ಮನೆ, ಆಸ್ತಿ ಕಳೆದುಕೊಂಡವರಿಗೆ ಈ ಹಣ ಬಳಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್​ ಚಂಡ ಮಾರುತ ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು 2 ರಾಜ್ಯಗಳ 1,500ಕ್ಕೂ ಹೆಚ್ಚು ಹಳ್ಳಿಗಳು ಹಾನಿಗೊಂಡಿವೆ. ಚಂಡಮಾರುತದಿಂದ 4.5 ಮಿಲಿಯನ್​ ಜನರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ 80 ಮಂದಿ ಮೃತಪಟ್ಟಿದ್ದಾರೆ. ಸಮುದ್ರ ತೀರದಲ್ಲಿರುವವರನ್ನು ಸರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net