More

    ಶ್ರಮಿಕ್ ರೈಲಿನಲ್ಲಿ ಹೋಗುತ್ತಿದ್ದ ವಲಸೆ ಕಾರ್ಮಿಕ ಯುವತಿಗೆ ಹೆರಿಗೆ

    ನವದೆಹಲಿ: ದೇಶದಾದ್ಯಂತ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಶ್ರಮಿಕ್ ರೈಲುಗಳಲ್ಲಿ ದಿನವೂ ಸಾವಿರಾರು ಜನ ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ ವಯಸ್ಸಾದವರು, ಮಹಿಳೆಯರು, ಗರ್ಭಿಣಿಯರೂ ಇದ್ದಾರೆ. ಇಂಥದೇ ಒಂದು ರೈಲಿನಲ್ಲಿ ಪತಿಯೊಂದಿಗೆ ತನ್ನ ಊರಿಗೆ ಹೋಗುತ್ತಿದ್ದ ಯುವತಿಯೊಬ್ಬಳು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಇದನ್ನೂ ಓದಿ: ಶಾಲೆಗಳ ಆರಂಭ ಅಧ್ಯಯನಕ್ಕೆ ಸಮಿತಿ

    21 ವರ್ಷ ವಯಸ್ಸಿನ ರಂಜಿನಿ ನಿಷಾದ್ ತನ್ನ ಪತಿಯೊಂದಿಗೆ ದಿಲ್ಲಿಯಿಂದ ಉತ್ತರ ಪ್ರದೇಶದ ಕಾನ್ಪುರಕ್ಕೆ ಪ್ರಯಾಣ ಬೆಳೆಸಿದ್ದಳು. ಮಾರ್ಗಮಧ್ಯೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಈ ವಿಷಯವನ್ನು ಆಕೆಯ ಪತಿ ರೈಲ್ವೆ ಸಿಬ್ಬಂದಿಗೆ ತಿಳಿಸಿದ. ಅವರಿಂದ ರೈಲ್ವೆ ಪೊಲೀಸರಿಗೆ ಸುದ್ದಿ ಮುಟ್ಟಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಕೆಯನ್ನು ಮಧ್ಯರಾತ್ರಿ 2 ಗಂಟೆಗೆ ರೈಲ್ವೆ ಆಸ್ಪತ್ರೆಗೆ ದಾಖಲಿಸಿದರು.

    ಇದನ್ನೂ ಓದಿ: ಪಾಲಕರಿಗೆ ಹೆಚ್ಚುವರಿ ಶುಲ್ಕ ಬರೆ: 50ಕ್ಕೂ ಹೆಚ್ಚಿನ ಶಾಲೆಗಳ ವಿರುದ್ಧ ದೂರು, ಶಿಕ್ಷಣ ಇಲಾಖೆಯ ಸಹಾಯವಾಣಿಗೆ ಕರೆ

    ಅಲ್ಲಿ ಆಕೆ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ, ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಆ ದಂಪತಿಯನ್ನು ಊರಿಗೆ ತಲುಪಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಶಾಲೆಗಳ ಆರಂಭಕ್ಕೆ ಮುಂದಿನ ವಾರದಲ್ಲಿ ದಿನಾಂಕ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts