ಬಿಡಿಎ ಮಾದರಿಯಲ್ಲಿ ಎಂಡಿಎ ಸ್ಥಾಪನೆ; ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ

MDA BDA
Published on

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ತೀವ್ರ ವಿವಾದಕ್ಕೆ ತುತ್ತಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಕಾಯಕಲ್ಪ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾದರಿಯಲ್ಲಿ ಸರ್ಕಾರ ಪ್ರತ್ಯೇಕ ಕಾಯ್ದೆ ರೂಪಿಸುತ್ತಿದೆ. ಸುವರ್ಣಸೌಧದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ವಿವಾದದಿಂದ ‘ಮುಡಾ’ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಹೊಸದಾಗಿ ತರುತ್ತಿರುವ ಕಾಯ್ದೆಗೂ ನಿವೇಶನ ಹಂಚಿಕೆಗೂ ಸಂಬಂಧವಿಲ್ಲ. ನಗರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ವಿಧೇಯಕ ರೂಪಿಸಲಾಗಿದೆ. ಇದೇ ಅಧಿವೇಶನದಲ್ಲಿಯೇ ವಿಧೇಯಕಕ್ಕೆ ಉಭಯ ಸದನಗಳ ಒಪ್ಪಿಗೆ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ.

ಮೈಸೂರು ಕಾಸ್ಮೋಪಾಲಿಟಿನ್ ಸಂಸ್ಕೃತಿ ಮೈಗೂಡಿಸಿಕೊಂಡು ಬೆಳೆಯುತ್ತಿದೆ. ನಗರದ ಜನಸಂಖ್ಯೆ 10 ಲಕ್ಷ ಮೀರುತ್ತಿದೆ. ಯೋಜನಾ ಪ್ರದೇಶದ ವ್ಯಾಪ್ತಿಯ ಜನಸಂಖ್ಯೆ 16.90 ಲಕ್ಷಕ್ಕಿಂತ ಹೆಚ್ಚಿದೆ. ಆಯವ್ಯಯ ಹಾಗೂ ಇತರ ಕಾರ್ಯಚಟುವಟಿಕೆ ವಿಸ್ತಾರವಾಗುತ್ತಿದೆ. ಅತಿವೇಗ ಹಾಗೂ ಬೃಹತ್ ಪ್ರಮಾಣದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡಿಎ ಮಾದರಿಯ ಪ್ರತ್ಯೇಕ ಕಾಯ್ದೆ ತರಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಾಧಿಕಾರದ ಮೂಲಕ ಕೈಗೊಳ್ಳುವ ಅಭಿವೃದ್ಧಿಗಳು ಸಮಗ್ರವಾಗಿರಬೇಕು. ನಿವೇಶನಗಳ ಬೇಕಾಬಿಟ್ಟಿ ಮಾರಾಟಕ್ಕೂ ಇದರಿಂದ ಬ್ರೇಕ್ ಬೀಳಲಿದೆ. ಸಮಗ್ರ ಮೂಲಸೌಕರ್ಯ ಕಲ್ಪಿಸುವುದು, ಮಾರುಕಟ್ಟೆ, ಅಂಚೆಕಚೇರಿ, ಬ್ಯಾಂಕ್, ಶಿಕ್ಷಣ ಸಂಸ್ಥೆ, ಹಾಲು, ಶಾಲೆ, ಆಸ್ಪತ್ರೆಗಳಂತಹ ಸೌಲಭ್ಯಗಳನ್ನು ಒದಗಿಸುವುದನ್ನು ಪ್ರಾಧಿಕಾರ ನಿರ್ವಹಿಸಲಿದೆ. ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಬಿಡಿಎ ಮಾದರಿಯಲ್ಲಿಯೇ ಪ್ರತ್ಯೇಕ ಕಾಯ್ದೆ ರೂಪಿಸಲು ನಿರ್ಧರಿಸಲಾಯಿತು.

ಗಾಂಧಿ ಭಾರತ ಕಾರ್ಯಕ್ರಮದ ಚರ್ಚೆ: ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ನೂರನೇ ವರ್ಷದ ಕಾರ್ಯಕ್ರಮ ಗಾಂಧಿ ಭಾರತದ ಬಗ್ಗೆ ಸಂಪುಟದಲ್ಲಿ ಅನೌಪಚಾರಿಕ ಚರ್ಚೆಯಾಗಿದೆ. ಬೆಳಗಾವಿ ಡಿಸಿ, ಎಸ್ಪಿ, ವಾರ್ತಾ ಇಲಾಖೆ ಆಯುಕ್ತರನ್ನು ಕರೆಸಿ ಮೂಲಸೌಲಭ್ಯಗಳ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸುಮಾರು 5 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಸೂಚನೆಗಳನ್ನು ನೀಡಲಾಯಿತು.

ಆಡಳಿತ ಮಂಡಳಿ: ಸರ್ಕಾರ ನೇಮಕ ಮಾಡುವ ಅಧ್ಯಕ್ಷರು ್ಝರ್ನಾಟಕ ಇಂಜಿನಿಯರಿಂಗ್ ಸೇವೆಯ ಒಬ್ಬ ಇಂಜಿನಿಯರ್ ್ಝಗರ ಯೋಜನಾ ಇಲಾಖೆ ಯೋಜನಾ ತಜ್ಞ ್ಝಾಸ್ತು ಶಿಲ್ಪಿ ್ಝಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ್ಝಬ್ಬ ವಿಧಾನಸಭಾ ಸದಸ್ಯ ್ಝಾಲ್ವರು ಎಸ್​ಸಿ ಎಸ್​ಟಿ ಸದಸ್ಯರು ್ಝರ್ನಾಟಕ ನೀರು ಸರಬರಾಜು ಮಂಡಳಿ ಪ್ರತಿನಿಧಿ ್ಝರ್ಥಿಕ ಸದಸ್ಯ ್ಝಸ್ಕಾಂ ಪ್ರತಿನಿಧಿ ್ಝಯುಕ್ತ ಹಾಗೂ ಕಾರ್ಯದರ್ಶಿ

ಹೊಸ ಕಾಯ್ದೆಯಲ್ಲಿ ಏನೇನು?: ಸದಸ್ಯರ ಅನರ್ಹತೆಗೆ ಅವಕಾಶ, ಅಧ್ಯಕ್ಷರ ಅವಧಿ 3 ವರ್ಷ, ಭೂ ಸ್ವಾಧೀನಕ್ಕೆ ನಿಯಮ ಮೂಲಸೌಕರ್ಯಗಳಿಲ್ಲದೆ ಕಟ್ಟಡ ನಿರ್ವಣಕ್ಕೆ ಮಾರಾಟವಿಲ್ಲ ಹೊಸ ಬಡಾವಣೆಗಳ ನಿರ್ಮಾಣ, ಕ್ರಮವಾಗಿ ಯಾವುದೇ ಬಡಾವಣೆ ಸ್ವಾಧೀನವಿಲ್ಲ, ಒಪ್ಪಂದದ ಪ್ರಕಾರ ಭೂ ಸ್ವಾಧೀನ, ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆಯೋಗ, ಎಂಡಿಸ ವ್ಯಾಪ್ತಿಯಲ್ಲಿ ಗೃಹ ಮಂಡಳಿಯಿಂದ ಯಾವುದೇ ಯೋಜನೆ ಜಾರಿ ಇಲ್ಲ

ಇತರ ನಿರ್ಣಯಗಳು

  • 112 ಏಕಲವ್ಯ ಮಾದರಿ ವಸತಿ ಶಾಲೆಗೆ 54.65 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ
  • ಎಸ್​ಟಿ 14 ಮಹಿಳಾ ಹಾಸ್ಟೆಲ್​ಗೆ 78 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ
  • ಕೆಎಸ್​ಪಿಸಿಬಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ನಿಯಮ
  • ಸಾಗರಮಾಲಾದಲ್ಲಿ 471.20 ಕೋಟಿ ರೂ. ಪರಿಷ್ಕೃತ ಅಂದಾಜು
  • ಕುಣಿಗಲ್ ಬಳಿಯ ರಾಜೇಂದ್ರ ಪ್ರಸಾದ್ ಶಿಕ್ಷಣ ಸಂಸ್ಥೆಗೆ 5 ಎಕರೆ ಜಮೀನು ಗುತ್ತಿಗೆ
  • ಮೈಸೂರು ಷುಗರ್ಸ್​ನ ವಿದ್ಯುತ್ ಬಿಲ್ ಮೇಲಿನ ಬಡ್ಡಿ 15.71 ಕೋಟಿ ರೂ. ಮನ್ನಾ
  • ತುಳಜಾಭವಾನಿ ದೇವಾಲಯಕ್ಕೆ ಜಮೀನು
  • ಗದಗ-ಬೆಟಗೇರಿಯಲ್ಲಿ ಪಿಪಿಪಿಯಡಿ ಘನತ್ಯಾಜ್ಯ ನಿರ್ವಹಣೆ
  • ಮದ್ದೂರು ಪಟ್ಟಣ ಒಳಚರಂಡಿಯ ಕೊಳವೆ ಬದಲಾವಣೆ 16.4 ಕೋಟಿ ರೂ.
  • ಸವದತ್ತಿ ಯಲ್ಲಮ್ಮ ಸ್ಥಳ ಅಭಿವೃದ್ಧಿಗೆ ಕೇಂದ್ರ ಮಂಜೂರು ಮಾಡಿರುವ 100 ಕೋಟಿ ರೂ. ಬಳಕೆ
  • ರೋರಿಕ್-ದೇವಿಕಾರಾಣಿ ಎಸ್ಟೇಟ್ ಅಭಿವೃದ್ಧಿಗೆ ಕೇಂದ್ರದ 99.17 ಕೋಟಿ ರೂ. ಬಳಕೆ
  • ಬೆಂಗಳೂರು ಸರ್ಕಾರಿ ವಸ್ತು ಸಂಗ್ರ ಹಾಲಯ ಅಭಿವೃದ್ಧಿಗೆ 26 ಕೋಟಿ ರೂ.
  • 4 ಸಾರಿಗೆ ನಿಗಮಗಳಲ್ಲಿ ಪಿಎಂ ಇ-ಬಸ್ ಹಾಗೂ ಇ-ಡ್ರೖೆವ್ ಯೋಜನೆ ಜಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net