ಪ್ರಧಾನಿ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ; ಪರೋಕ್ಷ ಟಾಂಗ್ ನೀಡಿದ ಈಶ್ವರಪ್ಪ

K S Eshwarappa
Published on

ಬಾಗಲಕೋಟೆ: ಚುನಾವಣಾ ಸಮಯ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ನಡುವೆ ಮಾತಿನ ಸಮರ ಏರ್ಪಟ್ಟಿರುವಂತೆ ಕಾಣುತ್ತಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಹಿರಿಯ ನಾಯಕರ ನಡುವೆಯೇ ಮಾತಿನ ಯುದ್ಧ ಏರ್ಪಟ್ಟಿದೆ. ಇದೀಗ ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

ನಮ್ಮ ಪಕ್ಷ ದೇಶ ಹಾಗೂ ರಾಜ್ಯವನ್ನು ಆಳುತ್ತಿದೆ. ಈಗ ನಮ್ಮ ಬಗ್ಗೆ ಮಾತನಾಡಿದರೆ ಸುಮ್ಮನೆ ಇರಬೇಕಾ? ಎಳೆದುಕೊಂಡು ಹೋಗಿ ಒದಿತೀವಿ ಎಂದು ರಾಜ್ಯದಲ್ಲಿ ರಾಜಕೀಯ ಮುಖಂಡರು ನಾಲಿಗೆ ಹರಿಬಿಟ್ಟಿರುವ ವಿಚಾರವಾಗಿ ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ರಾಹುಲ್ ಗಾಂಧಿ ಮಾತನಾಡಿರುವಾಗ, ಬಿಎಸ್‌ವೈ ಅವರು ಸ್ವಾಭಾವಿಕವಾಗಿ ರಾಹುಲ್ ಗಾಂಧಿಗೆ ಬಚ್ಚಾ ಅಂತ ಕರೆದರು. ಯಡಿಯೂರಪ್ಪನವರು ಬಚ್ಚಾ ಎಂದು ಹೇಳಿರುವುದು ವಿವಾದವಾಗುತ್ತಿದೆ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದವರು. ಪ್ರಧಾನಿ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಒಳ್ಳೆಯದು. ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಎಲ್ಲಾ ಕಳೆದುಕೊಂಡ ಮೇಲೆ ನಿರಾಸೆಯಿಂದ ಮಾತನಾಡುವ ಪರಿಸ್ಥಿತಿ ಕಾಂಗ್ರೆಸ್‌ನದ್ದಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net