

ತಿರುವನಂತಪುರಂ: ಕೃಷಿ ಭೂಮಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಕಾಡು ಹಂದಿಗಳಿಂದ ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಒಂದಿಲ್ಲೊಂದು ಉಪಾಯ ಹೂಡುತ್ತಿರುತ್ತಾರೆ. ಇದೀಗ ಕೇರಳದ ಕಣಿಯಂ ಪೊಯಿಲೂರು ಭಾಗದ ರೈತರಿಗೆ ಸಮಸ್ಯೆಯಾಗಿದ್ದ ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ.