EPF ನಲ್ಲಿ ಠೇವಣಿ ಮಾಡಿದರೆ ಪಿಂಚಣಿ: ಖಾತೆಯಿಂದ ಹಣ ಹಿಂಪಡೆಯಲೂ ಅವಕಾಶ.. ವಿವರ ಇಲ್ಲಿದೆ

epf
Published on

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಡೆಸುತ್ತಿರುವ ಇಪಿಎಫ್ ಯೋಜನೆಯಡಿಯಲ್ಲಿ ಭಾರಿ ಹಣವನ್ನು ಠೇವಣಿ ಮಾಡಬಹುದು. ಇದರಿಂದ ನಿವೃತ್ತಿಯ ನಂತರ ಪಿಂಚಣಿ ಸಿಗುತ್ತದೆ. ಅಷ್ಟೇ ಅಲ್ಲ, ತುರ್ತು ಸಂದರ್ಭಗಳಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯ ಸಹ ಲಭ್ಯವಿದೆ.

ಪಿಎಫ್​ನಲ್ಲಿ ಕೆಲವು ಸಂದರ್ಭಗಳಲ್ಲಿ ಮಾತ್ರ ಭಾಗಶಃ ಹಿಂಪಡೆಯುವಿಕೆಯನ್ನು ಅನುಮತಿಸಲಾಗುತ್ತದೆ. ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಸ್ಥಳಾಂತರಿಸುವಿಕೆಯನ್ನು ಸಹ ಮಾಡಬಹುದು.

ಮಕ್ಕಳ ಶಿಕ್ಷಣಕ್ಕಾಗಿ ನೀವು ಪಿಎಫ್ ನಿಧಿಯಿಂದ ಹಣವನ್ನು ಹಿಂಪಡೆಯಬಹುದು. ನೀವು ಅಥವಾ ನಿಮ್ಮ ಸಹೋದರ-ಸಹೋದರಿ ಅಥವಾ ಮಗ-ಮಗಳ ಮದುವೆ, ಮನೆ ಖರೀದಿಸಲು ಅಥವಾ ಮನೆಯಲ್ಲಿ ದುರಸ್ತಿ ಕೆಲಸಕ್ಕಾಗಿ ಪಿಎಫ್​ ನಿಧಿಯಿಂದ ಹಣವನ್ನು ಹಿಂಪಡೆಯಬಹುದು.

ಪಿಎಫ್​ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳುವುದಕ್ಕೆ ಎರಡು ಮಾರ್ಗಗಳಿವೆ. ಇಪಿಎಫ್​ಒ​ನ ಅಧಿಕೃತ ವೆಬ್‌ಸೈಟ್ ಮತ್ತು ಉಮಂಗ್ ಆಪ್ ಮೂಲಕ ಹಣವನ್ನು ಹಿಂಪಡೆಯಬಹುದು.

ಅರ್ಜಿ ಸಲ್ಲಿಕೆ ಹೇಗೆ?:EPF

ಮೊದಲನೆಯದಾಗಿ ಯುಎಎನ್​ ಮತ್ತು ಪಾಸ್‌ವರ್ಡ್ ಸಹಾಯದಿಂದ ಇಪಿಎಫ್​ಒ ​​ಪೋರ್ಟಲ್‌ಗೆ ಲಾಗ್ ಇನ್ ಆಗಬೇಕು. ಆಗ ಆನ್‌ಲೈನ್ ಸೇವೆಗೆ ಹೋಗಿ, ಕ್ಲೈಮ್ ಅನ್ನು ಆಯ್ಕೆ ಮಾಡಿ ಮತ್ತು ಸ್ವಯಂ ಮೋಡ್ ಸೆಟಲ್‌ಮೆಂಟ್ ಅನ್ನು ಕ್ಲಿಕ್ ಮಾಡಿ, ನಂತರ, ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಮತ್ತು ಖಾತೆಯ ಪಾಸ್‌ಬುಕ್ ಅಥವಾ ಚೆಕ್ ಅನ್ನು ಅಪ್‌ಲೋಡ್ ಮಾಡಬೇಕು. ಇದಾದ ನಂತರ ಹಣವನ್ನು ಹಿಂಪಡೆಯಲು ಕಾರಣ ತಿಳಿಸಬೇಕು.

ಇನ್ನು ಉಮಾಂಗ್ ಅಪ್ಲಿಕೇಶನ್‌ ಬಳಸಿ ಹಣ ಹಿಂಪಡೆಯಬೇಕಾದರೆ, ಮೊದಲು ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯ ಮೂಲಕ ಆ್ಯಪ್‌ನಲ್ಲಿ ನೋಂದಾಯಿಸಬೇಕು. ನಂತರ "ಇಪಿಎಫ್​ಒ" ಸೇವೆಯ ಆಯ್ಕೆಯನ್ನು ಆರಿಸಿ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯ ಮೂಲಕ ಲಾಗ್ ಇನ್ ಆಗಬೇಕು. ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಓಟಿಪಿ ಭರ್ತಿ ಮಾಡಿ, "ಪಿಎಫ್ ವಿತ್ ಡ್ರಾವಲ್" ಆಯ್ಕೆಗೆ ಹೋಗಿ ಮತ್ತು "ಕ್ಲೈಮ್ ಫಾರ್ಮ್" ಕ್ಲಿಕ್ ಮಾಡಬೇಕು. ಇದರ ನಂತರ, ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಆಗ ಮತ್ತೆ ಸ್ವೀಕರಿಸಿದ ಒಟಿಪಿಯನ್ನು ಮೊಬೈಲ್ ಸಂಖ್ಯೆಯಲ್ಲಿ ನಮೂದಿಸಬೇಕು.

10 ದಿನದಲ್ಲಿ EPF ಹಣ:

ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ವಿನಂತಿಯನ್ನು ನೀಡಿದ ನಂತರ, 7 ರಿಂದ 10 ಕೆಲಸದ ದಿನಗಳಲ್ಲಿ ಹಣ ಬ್ಯಾಂಕ್ ಖಾತೆಗೆ ಬರುತ್ತದೆ. ಈ ದಿನಗಳಲ್ಲಿ ಹಣ ಬರದಿದ್ದರೆ, ಸಹಾಯವಾಣಿ ಸಂಖ್ಯೆ 1800-180-1425 ಅನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net