

ಟೆಹ್ರಾನ್: ಇಸ್ರೇಲ್(Israel) ಮೇಲಿನ ದಾಳಿಯ ನಂತರ ಇದೀಗ ಇರಾನ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಘೋಷಿಸಿದ್ದು, ಗುರುವಾರ ಸ್ಥಳೀಯ ಸಮಯ 5 ಗಂಟೆಯವರೆಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ.
ಜೋರ್ಡಾನ್ ಮತ್ತು ಇರಾಕ್ ಸಹ ತನ್ನ ವಾಯುಪ್ರದೇಶವನ್ನು ಮುಚ್ಚಿವೆ. ಮಂಗಳವಾರ ರಾತ್ರಿ, ಇರಾನ್ 181 ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ದಾಳಿ ಮಾಡಿತು. ಈ ಸಮಯದಲ್ಲಿ, ಇಸ್ರೇಲ್(Israel) ತನ್ನ ವಾಯುಪ್ರದೇಶವನ್ನು ಒಂದು ಗಂಟೆ ಮತ್ತು ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಸ್ವಲ್ಪ ಸಮಯದವರೆಗೆ ಮುಚ್ಚಿತ್ತು.
ಜೋರ್ಡಾನ್ ಮತ್ತು ಇರಾಕ್ ಭದ್ರತಾ ಕಾರಣಗಳಿಂದಾಗಿ ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿವೆ. ಮುಂದಿನ ಆದೇಶದವರೆಗೆ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಭಾರತೀಯ ವಿದೇಶಾಂಗ ಸಚಿವಾಲಯವು ಇರಾನ್ನಲ್ಲಿ ವಾಸಿಸುವ ತನ್ನ ಎಲ್ಲ ಜಾಗರೂಕರಾಗಿರಬೇಕು. ಇರಾನ್ಗೆ ಪ್ರಯಾಣಿಸಬಾರದು. ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದೆ. ಇನ್ನು ಭಾರತೀಯ ರಾಯಭಾರ ಕಚೇರಿ, ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವಂತೆ ಎಂದು ಸಲಹೆ ನೀಡಿದೆ.