

ಸೋಮವಾರಪೇಟೆ: ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಹಾನಿ ಪ್ರದೇಶಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಮತ್ತು ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಹಾನಗಲ್ಲು ಗ್ರಾಮದ ಲೋಹಿತ್ ಅವರ ಮನೆ ಮಳೆಯಿಂದ ಹಾನಿಗೊಂಡಿದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಜೋಸೆಫ್ ಮತ್ತು ರೂಪಾ ಅವರ ಮನೆಯ ಮುಂಭಾಗ ಬರೆ ಕುಸಿದಿರುವ ಜಾಗಕ್ಕೆ ಭೇಟಿ ನೀಡಿದರು. ಮಳೆಹಾನಿಗೆ ಪರಿಹಾರ ಕಲ್ಪಿಸಲು ತಾಲೂಕು ಆಡಳಿತಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಕಾನ್ವೆಂಟ್ ಬಾಣೆಯ ಗಣೇಶ್ ಅವರಿಗೆ ಹಾನಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್ ಟಾರ್ಪಾಲ್ ವಿತರಿಸಿದರು.
ಹಾನಗಲ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ, ಸದಸ್ಯರಾದ ಸುದೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಇದ್ದರು.