

Firing: ತಡರಾತ್ರಿ ಮೋಜಿನ ಪಾರ್ಟಿ ಬಳಿಕ ಮೂವರು ಪುರುಷರು, ಓರ್ವಮಹಿಳೆಯಿದ್ದ ಗುಂಪುಗೆ ಸ್ಥಳೀಯ ಕ್ಲಬ್ವೊಂದರ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆ ಕ್ಲಬ್‌ನ ಭದ್ರತಾ ಸಿಬ್ಬಂದಿ ಮತ್ತು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಬಳಿಕ ಗುಂಡಿನ ಚಕಮಕಿ ನಡೆದಿದೆ. ಘಟನೆಯ ವಿಡಿಯೋ ಭಾನುವಾರ (ಸೆ. 21) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಲಖನೌದಲ್ಲಿ ಪಲಾಸಿಯೋ ಮಾಲ್ ಹೊರಗೆ ತಡರಾತ್ರಿ ಮೋಜಿನ ಪಾರ್ಟಿ ನಡೆದಿದ್ದು, ಬಳಿಕ ಪಕ್ಕದಲ್ಲಿನ ಸ್ಥಳೀಯ ಟಾನಿಕ್ ಕ್ಲಬ್ಗೆ ಮೂವರು ಪುರುಷರು, ಓರ್ವ ಮಹಿಳೆಗೆ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಈ ಹಿನ್ನೆಲೆ ಸಿಬ್ಬಂದಿ ಮತ್ತು ನಾಲ್ವರ ನಡುವೆ ಹೊಡೆದಾಟ ನಡೆದು ಗುಂಡಿನ ಚಕಮಕಿ ನಡೆದಿದೆ.
ಶನಿವಾರ (ಸೆ. 20) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹರ್ಷ್ ಮಿಶ್ರಾ, ಪ್ರಿನ್ಸ್ ವರ್ಮಾ, ರೋಹಿತ್ ಪಟೇಲ್, ಮತ್ತು ಸ್ವಾತಿ ವರ್ಮಾ ಎಂದು ಗುರುತಿಸಲಾಗಿದೆ. ತಡರಾತ್ರಿ ಆಗಿದ್ದರಿಂದ ಕ್ಲಬ್ ಮುಚ್ಚಿದೆ, ಪ್ರವೇಶ ಇಲ್ಲ, ಸ್ಥಳದಿಂದ ಹೊರಹೋಗುವಂತೆ ಸಿಬ್ಬಂದಿ ಹೇಳಿದ್ದು ಗಲಾಟೆಗೆ ಕಾರಣವಾಗಿದೆ. ತಕ್ಷಣ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ಈ ವೇಳೆ ಹರ್ಷ್ ಮಿಶ್ರಾ, ರೋಹಿತ್ ಪಟೇಲ್ ತಮ್ಮ ಪರವಾನಗಿ ಪಡೆದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕ್ಲಬ್‌ನ ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿ ನಾಲ್ವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಘಟನೆ ಬಗ್ಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಲ್ ಹೊರಗೆ ನಡೆದ ಘಟನೆ ಹಿನ್ನೆಲೆ ಬೌನ್ಸರ್ಗಳ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದು ಒಂದು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಐದು ಲೈವ್ ಕಾರ್ಟ್ರಿಡ್ಜ್‌ಗಳು, ಎರಡು ಖಾಲಿ ಜಾಗಗಳು ಮತ್ತು ಘಟನೆಯಲ್ಲಿ ಬಳಸಲಾದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)