ಮೀಸಲಾತಿ ಅಗತ್ಯವಿರುವ ಜನರಿಗೆ ಮಾತ್ರ ಇರಬೇಕು; ಈ ಕುರಿತು ಚರ್ಚೆ ನಡೆಯಲಿ ಎಂದ ಎನ್​ಸಿಪಿ ನಾಯಕಿ ಸುಪ್ರೀಯಾ ಸುಳೆ| Supriya Sule

Untitled design (65)
Published on

Supriya Sule: ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಕೋಟದಡಿ ಓಬಿಸಿ ಮೀಸಲಾತಿ ಬೇಕೆಂದು ಮುಂಬೈನಲ್ಲಿ ಮರಾಠರು ಆಂದೋಲನ ಚರ್ಚೆಯಲ್ಲಿರುವಾಗಲೇ ಮಹಾರಾಷ್ಟ್ರದ ಎನ್​ಸಿಪಿ ನಾಯಕಿ ಸುಪ್ರೀಯಾ ಸುಳೆ, ಮೀಸಲಾತಿ ಅಗತ್ಯವಿರುವ ಜನರಿಗೆ ಅಷ್ಟೇ ಇರಬೇಕು. ಈ ಕುರಿತು ಚರ್ಚೆ ನಡೆಯಲಿ ಎಂದು ಭಾನುವಾರ(ಸೆ. 21) ಹೇಳಿದ್ದಾರೆ.

ಎನ್​ಡಿಟಿವಿಯ ಕಾನ್​ಕ್ಲೇವ್​ನಲ್ಲಿ ಭಾಗವಹಿಸಿ ಮಾತನಾಡಿರುವ ಸುಪ್ರಿಯಾ ಸುಳೆ, ಮೀಸಲಾತಿ ನಿಜವಾಗಿಯೂ ಅಗತ್ಯವಿರುವ ಜನರಿಗೆ ಮಾತ್ರ ಇರಬೇಕು. ನಾನು ಮೀಸಲಾತಿ ಕೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ನನ್ನ ತಂದೆ-ತಾಯಿ ವಿದ್ಯಾವಂತರು. ನಾನು ವಿದ್ಯಾವಂತೆ, ನನ್ನ ಮಕ್ಕಳು ವಿದ್ಯಾವಂತರು. ನಾನು ಮೀಸಲಾತಿಗೆ ಅರ್ಜಿ ಸಲ್ಲಿಸಿದರೆ ನಾಚಿಕೆ ಆಗುತ್ತದೆ. ಅವಿದ್ಯಾವಂತರ ಕುಟುಂಬಗಳಿಗೆ ಇದು ಬೇಕು. ನನ್ನ ಮಗು ಮುಂಬೈನಲ್ಲಿ ಉತ್ತಮ ಶಾಲೆಗಳಲ್ಲಿ ಓದುತ್ತಿದೆ, ಅದೇ ಚಂದ್ರಾಪುರದಲ್ಲಿ ಶಿಕ್ಷಣ ಪಡೆಯಲು ಆಗದಂತಹ ಮಕ್ಕಳಿಗೆ ಇದು ಸಹಾಯಕವಾಗಬಹುದು ಎಂದು ಹೇಳಿದ್ದಾರೆ.

ಇದೆ ವೇಳೆ ಮೀಸಲಾತಿ ಕುರಿತು ಚರ್ಚೆ ನಡೆಸುವಂತೆ ಕರೆ ನೀಡಿದ ಅವರು, ನಾವೆಲ್ಲರೂ ಈ ಬಗ್ಗೆ ಚರ್ಚೆ ನಡೆಸೋಣ. ಪ್ರತಿಯೊಬ್ಬರು ಇದರ ಬಗ್ಗೆ ಏನು ಯೋಚಿಸುತ್ತಾರೆ ಎಂದು ಕೇಳೋಣ. ಮುಕ್ತ ಚರ್ಚೆ ನಡೆಸೋಣ. ಕಾಲೇಜುಗಳಲ್ಲಿ, ಸಮಾಜದಲ್ಲಿ, ಪ್ರತಿಯೊಂದು ವೇದಿಕೆಯಲ್ಲಿಯೂ ನಾವು ಚರ್ಚೆ ನಡೆಸಬೇಕಾಗಿದೆ ಎಂದಿದ್ದಾರೆ.

ಹಾಗೇ ಮುಂದುವರೆದು ಆರ್ಥಿಕ ಆಧಾರಿತ ಮೀಸಲಾತಿ ಬೇಕೇ ಅಥವಾ ಜಾತಿ ಆಧಾರಿತ ಮೀಸಲಾತಿ ಬೇಕೆ ಎಂದು ಸಭೆಯಲ್ಲಿದ್ದವರನ್ನು ಕೇಳಿದ ಅವರು, ಸಭೆಯಲ್ಲಿದ್ದರು ಹೆಚ್ಚಿನದಾಗಿ ಆರ್ಥಿಕ ಆಧಾರಿತ ಮೀಸಲಾತಿ ಬೇಕೆಂದಿದ್ದಾರೆ. ಅದಕ್ಕೆ ಧನ್ಯವಾದ ಅರ್ಪಿಸಿದ ಅವರು ನಾನು ಜನರಲ್ ಝೆಡ್ ಜೊತೆ ತುಂಬಾ ಸಂಪರ್ಕದಲ್ಲಿದ್ದೇನೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net