ಟೀ ಮಾರುವ ಮೂಲಕ ಕುಟುಂಬದವರ ಹೊಟ್ಟೆ ತುಂಬಿಸಿದ, ರಿಯಾಲಿಟಿ ಶೋನಿಂದ ಜನಮನ್ನಣೆ ಗಳಿಸಿದ ಈ ನಟ ಇಂದು ಕೋಟ್ಯಾಧಿಪತಿ!

annu
Published on

ಮುಂಬೈ: ಇಂದು ನಿಮಗೆ ಹಿಂದಿ ಚಿತ್ರರಂಗದ ಓರ್ವ ಶ್ರೇಷ್ಠ ಕಲಾವಿದನ ಬಗ್ಗೆ ಹೇಳಲಿದ್ದೇವೆ. ಅವರ ಜೀವನವು ಇತರರಿಗೆ ಮಾದರಿಯೂ ಹೌದು. 1979 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ನಟ ಇಂದಿಗೂ ಜನರ ಹೃದಯವನ್ನು ಆಳುತ್ತಿದ್ದಾರೆ. ಅವರ ಬಳಿ ಇಂದು ಕೋಟಿಗಟ್ಟಲೆ ಸಂಪತ್ತು ಇದ್ದರೂ ಇಲ್ಲಿಗೆ ತಲುಪುವ ಪಯಣ ಸುಲಭವಾಗಿರಲಿಲ್ಲ. ನಟನ ಬಾಲ್ಯ ಅತ್ಯಂತ ಕಷ್ಟಕರವಾಗಿದ್ದು, ಬಡತನದಲ್ಲಿ ಬೆಳೆದರು.

ಕುಟುಂಬ ಪೋಷಣೆಗೆ ಟೀ ಮಾರಾಟ

ಈ ನಟ ತನ್ನ ಬಾಲ್ಯದಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದರು. ಕೆಲವೊಮ್ಮೆ ಚಹಾ ಮಾರುವ ಮೂಲಕ, ಕೆಲವೊಮ್ಮೆ ಲಾಟರಿ ಟಿಕೆಟ್ ಮಾರಾಟ ಮಾಡುವ ಮೂಲಕ, ಹೇಗಾದರೂ ತನ್ನ ಕುಟುಂಬವನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರತರಬೇಕೆಂದು ಕೆಲಸ ಮಾಡುತ್ತಿದ್ದರು.

ಯಾವಾಗ ಖ್ಯಾತ ಹಿಂದಿ ಸಿನಿಮಾ ನಿರ್ಮಾಪಕ ಶ್ಯಾಮ್ ಬೆನಗಲ್ ಇವರನ್ನು ಗಮನಿಸಿದರೋ ಆಗ ಈ ನಟನ ಅದೃಷ್ಟ ಬದಲಾಗಿದೆ. ಹೌದು, 23 ನೇ ವಯಸ್ಸಿನಲ್ಲಿ ಈ ನಟ ನಾಟಕದಲ್ಲಿ 70 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಅವರ ಪಾತ್ರ ನೋಡಿದ ನಂತರ ಶ್ಯಾಮ್ ಬೆನಗಲ್ ಅವರು ನಟನ ದೊಡ್ಡ ಅಭಿಮಾನಿಯಾದರು.

ನಂತರ ನಟನಿಗೆ ತನ್ನ 'ಮಂಡಿ' ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. ಇಲ್ಲಿಂದ ಮುಂದೆ ಈ ನಟನ ಅದೃಷ್ಟ ಬದಲಾಯಿತು. ಮತ್ತವರು ಹಿಂತಿರುಗಿ ನೋಡಲಿಲ್ಲ. ಆದರೆ ಈ ನಟ ದೊಡ್ಡ ಪರದೆಯ ಮೇಲೆ ಅನೇಕ ಚಿತ್ರಗಳನ್ನು ಮಾಡಿದರೂ, ಅವರು ತಮ್ಮ ನೈಜ ಗುರುತನ್ನು ಪಡೆದದ್ದು ಸಣ್ಣ ಪರದೆಯಿಂದಲೇ.

ಹೌದು, ಅವರು ಬೇರಾರೂ ಅಲ್ಲ, ಬಾಲಿವುಡ್ ಹಿರಿಯ ನಟ ಅನ್ನು ಕಪೂರ್. ಇಂದು ಫೆಬ್ರವರಿ 20 ರಂದು ಅನ್ನು ಕಪೂರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಫೆ.20, 1956 ರಂದು ಭೋಪಾಲ್‌ನಲ್ಲಿ ಜನಿಸಿದ ಅನ್ನು ಕಪೂರ್, 1983 ರ 'ಮಂಡಿ' ಚಿತ್ರದ ಮೂಲಕ ಬಾಲಿವುಡ್​​​ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅನ್ನು ಕಪೂರ್ ದೂರದರ್ಶನದಲ್ಲಿ 'ಅಂತಕ್ಷರಿ' ಟಿವಿ ಕಾರ್ಯಕ್ರಮ ಹೋಸ್ಟ್ ಮಾಡಲು ಪ್ರಾರಂಭಿಸಿದಾಗ, ಅವರು ಮನೆ ಮನೆಯಲ್ಲೂ ಪ್ರಸಿದ್ಧರಾದರು. ಅವರ ಕಾರ್ಯಕ್ರಮ ಬಹಳ ಜನಪ್ರಿಯವಾಯಿತು. ಇಂದಿಗೂ ಜನರು ಈ ಕಾರ್ಯಕ್ರಮದಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ.

ನಿವ್ವಳ ಮೌಲ್ಯ 

100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಅನ್ನು ಕಪೂರ್ ಸದ್ಯ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ಮುಂಬೈನಲ್ಲಿ ಸ್ವಂತ ಐಷಾರಾಮಿ ಮನೆ ಇದೆ. ಇದಲ್ಲದೇ ಅವರ ಬಳಿ ಹಲವು ಐಷಾರಾಮಿ ಕಾರುಗಳೂ ಇದ್ದು, ಅದರ ಬೆಲೆ ಕೋಟಿಗಟ್ಟಲೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net