More

    ‘ನಮ್ಮ ಮೆಟ್ರೋ’ ನೇರಳೆ ಮಾರ್ಗದ ತಾಂತ್ರಿ ದೋಷ ನಿವಾರಣೆ

    ಬೆಂಗಳೂರು: ಇಂದು ಬೆಳಗ್ಗೆ (ಫೆ.20) ನಮ್ಮ ಮೆಟ್ರೋದ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ತಾಂತ್ರಿಕ ಕಾರಣದಿಂದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ರೈಲುಗಳ ಸಂಚಾರ ನಿಂತಿದ್ದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಭಾರೀ ಜನದಟ್ಟಣೆ ಉಂಟಾಗಿತ್ತು. ಕಚೇರಿಗಳಿಗೆ ತೆರಳುವವರಿಗೆ ಸಮಸ್ಯೆಯಾಗಿದ್ದು, ಶಾಲಾ – ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ರೈಲು ಸಂಚಾರ ಇಲ್ಲದೇ ಪರದಾಡುತ್ತಿದ್ದರು.

    ಆದರೆ ಇದೀಗ ನೇರಳೆ ಮಾರ್ಗದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಸರಿಪಡಿಸಲಾಗಿದೆ ಎಂದು ನಮ್ಮ ಮೆಟ್ರೋ ಹೇಳಿದೆ.

    'ನಮ್ಮ ಮೆಟ್ರೋ' ನೇರಳೆ ಮಾರ್ಗದ ತಾಂತ್ರಿ ದೋಷ ನಿವಾರಣೆ

    ಈ ಬಗ್ಗೆ ಎಕ್ಸ್‌ನಲ್ಲಿ, “ನೇರಳೆ ಮಾರ್ಗದಲ್ಲಿ ತಾಂತ್ರಿಕ ಅಡಚಣೆಯನ್ನು ಬೆಳಗ್ಗೆ 9.20ಕ್ಕೆ ಸರಿಪಡಿಸಲಾಗಿದ್ದು, ರೈಲುಗಳು ವೇಳಾಪಟ್ಟಿಯ ವೇಗದಲ್ಲಿ ಚಲಿಸುತ್ತಿವೆ. ಕ್ಯಾಸ್ಕೆಡಿಂಗ್ ಪರಿಣಾಮಗಳನ್ನು ಸಾಮಾನ್ಯಗೊಳಿಸಲು ಮತ್ತು ವೇಳಾಪಟ್ಟಿಯ ಪ್ರಕಾರ ರೈಲು ಚಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ” ಎಂದು ನಮ್ಮ ಮೆಟ್ರೊ ಪೋಸ್ಟ್ ಹಂಚಿಕೊಂಡಿದೆ.

    ಸುಮಾರು 45 ನಿಮಿಷಗಳ ಕಾಲ ಯಾವುದೇ ಮೆಟ್ರೋ ರೈಲುಗಳು ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿರಲಿಲ್ಲ. ಪ್ರಯಾಣಿಕರು ನಿಲ್ದಾಣಗಳಲ್ಲಿಯೇ ಕಾಯುತ್ತಿದ್ದರು. ಎಲ್ಲ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ತಾಂತ್ರಿಕ ಸಮಸ್ಯೆಗೂ ಮುನ್ನ ಹಲವು ನಿಲ್ದಾಣಗಳಲ್ಲಿ ಮೆಟ್ರೋ ಹತ್ತಿದ್ದ ಪ್ರಯಾಣಿಕರನ್ನು ಇಳಿಯುವಂತೆ ಮನವಿ ಮಾಡಿದ್ದು, ಅವಸರವಿದ್ದರೆ ಪರ್ಯಾಯ ಸಾರಿಗೆಯನ್ನು ಬಳಸುವಂತೆ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್‌ ಘೋಷಣೆ ಮಾಡಿತ್ತು.

    ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ತಾಂತ್ರಿಕ ಸಮಸ್ಯೆಗಳು ಹೆಚ್ಚಿಗೆ ಕಂಡುಬರುತ್ತಿದ್ದು, ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರಲ್ಲೂ ನೇರಳೆ ಮಾರ್ಗದಲ್ಲಿ ಹೆಚ್ಚಿನ ಜನ ಸಂದಣಿ ಇರುವುದರಿಂದ ಮೆಟ್ರೋ ರೈಲು ಸಂಚಾರ ನಿಂತರೆ ಬಹಳಷ್ಟು ಜನಕ್ಕೆ ಸಮಸ್ಯೆಯಾಗುತ್ತದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts