ಸಂಜೆಯ ಚಹ ಜೊತೆ ಸವಿಯಿರಿ ಮಸಾಲ ಪಾವ್​! |Recipe

untitled-design-2025-08-16t145706319-68a04efc14234
Published on

Recipe: ಮಸಲಾ ಪಾವ್ ಒಂದು ಜನಪ್ರಿಯ ಭಾರತೀಯ ಸ್ಟ್ರೀಟ್ ಫುಡ್ ಆಗಿದ್ದು, ಸಂಜೆಯ ತಿಂಡಿಗೆ ಸೂಕ್ತವಾದ ರುಚಿಕರ ತಿನಿಸು. ಸಾಮಾನ್ಯವಾಗಿ ಸಂಜೆ 4 ರಿಂದ 6 ಗಂಟೆಯ ನಡುವೆ ಸವಿಯಲಾಗುವ ಈ ತಿಂಡಿಗಳು ರುಚಿಕರವಾಗಿಯೂ ಸುಲಭವಾಗಿಯೂ ತಯಾರಾಗುತ್ತವೆ. ಈ ತಿಂಡಿಯನ್ನು ಇದನ್ನು 20-25 ನಿಮಿಷಗಳಲ್ಲಿ ತಯಾರಿಸಬಹುದು. ಹಾಗಿದ್ದರೆ ಏಕೆ ಸಮಯವನ್ನು ಹಾಳು ಮಾಡುತ್ತೀರಾ.. ಈಗಲೇ ಟ್ರೈ ಮಾಡಿ....

ಬೇಕಾಗುವ ಪದಾರ್ಥಗಳು

* ಚೀಸ್​

*  2 ಈರುಳ್ಳಿ

* 1 ದೊಡ್ಡ ಮೆಣಸಿನಕಾಯಿ

*  2 ಟೊಮೆಟೋ

*  ಗರಂ ಮಸಾಲ

*  ದನಿಯಾ ಪುಡಿ

*  ಅರಿಶಿಣ ಪುಡಿ

*  2 ಬೆಳ್ಳುಳ್ಳಿ

* 5 ಒಣ ಮೆಣಸಿನಕಾಯಿ

*  ಪಾವ್​ಬಜಿ ಮಸಾಲ

*  ಕೊತ್ತುಂಬರಿ

* ನಿಂಬೆಹಣ್ಣು

* ಉಪ್ಪು

* ಬನ್​

ಮಾಡುವ ವಿಧಾನ

ಮೊದಲು ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಒಣ ಮೆಣಸು ಹಾಕಿ ರುಬ್ಕೊಂಡು ರುಬ್ಬಿ ಪಕ್ಕಕ್ಕಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ಚೀಸ್​ ಹಾಕಿ ಕರಗಿಸಿಕೊಳ್ಳಿ, ಅದಕ್ಕೆ ಈರುಳ್ಳಿ, ಮೆಣಸಿನಕಾಯಿ (ಕ್ಯಾಲ್ಸಿಯಂ), ಟೊಮೆಟೋ, ಗರಂಮಸಾಲ, ದನಿಯಾ, ಅರಿಶಿಣ ಪುಡಿ, ರುಬ್ಬಿದಂತಹ ಮಿಶ್ರಣ ಹಾಗೂ ಪಾವಬಾಜಿ ಮಸಾಲವನ್ನು ಹಾಕಿ ಮಿಕ್ಸ್​ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಬನ್​ಗಳನ್ನು ತೆಗೆದುಕೊಂಡು ಅದನ್ನು 2 ಭಾಗ ಕತ್ತರಿಸಿ ಅದಕ್ಕೆ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಎರಡೂ ಬನ್​ಗಳಿಗೆ ಹಚ್ಚಿರಿ. ಅದರ ಮೇಲೆ ಚೀಸ್​ ಇಡಿ.

ಈಗ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಗೂ ರೆಡಿಮಾಡಿಟ್ಟಿರುವ ಮಿಶ್ರಣವನ್ನು ಸ್ವಲ್ಪ ಹಾಕಿ. ಸ್ಟಫ್ಫಿಂಗ್​ ಮಾಡಿಟ್ಟಿರುವ ಬನ್​ಗಳನ್ನು 2 ಭಾಗ ಸ್ವಲ್ಪ ಸಮಯದ ಕಾಲ ಬೇಯಿಸಿ. ಅದಕ್ಕೆ ಕೊತ್ತುಂಬರಿ ಸೊಪ್ಪು, ಹಾಗೂ ನಿಂಬೆಹಣ್ಣು ಸೇರಿಸಿ. ಬಿಸಿಬಿಸಿ ಇರುವಾಗಲೇ ಸೇವಿಸಿ ರುಚಿಕರವಾದ ಮಸಾಲ ಪಾವ್​.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net