ಸಿಯಾಟಲ್ ಟವರ್​ ಮೇಲೆ ಹಾರಿದ ತ್ರಿವರ್ಣ ಧ್ವಜ: ಅಮೆರಿಕಾದಲ್ಲಿ ಇದೇ ಮೊದಲು.. ರೋಮಂಚನಕಾರಿ Video ಇಲ್ಲಿದೆ ನೋಡಿ

photo (29)
Published on

Video: ಅಮೆರಿಕ​/ಸಿಯಾಟಲ್​​: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಸಿಯಾಟಲ್‌ನ ಪ್ರಸಿದ್ಧ 605 ಅಡಿ ಎತ್ತರದ ಬಾಹ್ಯಕಾಶ ಕೇಂದ್ರ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.

ಸಿಯಾಟಲ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್, ಸಿಯಾಟಲ್ ಮೇಯರ್ ಬ್ರೂಸ್ ಹ್ಯಾರೆಲ್ ಮತ್ತು ಸಿಯಾಟಲ್ ನಗರ ನಾಯಕತ್ವದ ಇತರ ಆಯ್ದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೆರಿಕದ ಪ್ರಸಿದ್ಧ ತಾಣಗಳಲ್ಲಿ ಸಿಯಾಟಲ್​ ಟವರ್​ ಒಂದಾಗಿದ್ದು, ವಿದೇಶಿವೊ0ದರ ಭಾವುಟವನ್ನು ಈ ತಾಣದಲ್ಲಿ ಇದೇ ಮೊದಲ ಬಾರಿಗೆ ಹಾರಿಸಲಾಗಿದೆ.

ಸಿಯಾಟಲ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ಭಾರತದ ಧ್ವಜವನ್ನು ಗಾಳಿಯಲ್ಲಿ ಎತ್ತರಕ್ಕೆ ಹಾರಿಸುತ್ತಿರುವ ವೀಡಿಯೊದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

ಇಂಡಿಯಾ ಇನ್​ ಸಿಯಾಟಲ್​​ ಎಂಬ ಖಾತೆ ಹಂಚಿಕೊಂಡಿದ್ದು, "ಸಿಯಾಟಲ್‌ನಲ್ಲಿ ಇದು ಐತಿಹಾಸಿಕ ಕ್ಷಣ. ಭಾರತದ ತ್ರಿವರ್ಣ ಧ್ವಜ ಸಿಯಾಟಲ್‌ನ ದಿಗಂತದ ಮೇಲೆ ಹಾರುತ್ತಿರುವುದು ಇದೇ ಮೊದಲು. ಭಾರತದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net