ಪ್ರವಾಸದಿಂದ ಜೀವನೋತ್ಸಾಹ ವೃದ್ಧಿ

25bnk1
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸುಂಕಸಾಲೆಯಲ್ಲಿ ವಿವಿಧ ಸಂಘಟನೆಗಳಿಂದ ಗಿಡ ನೆಡಲಾಯಿತು. ಲೋಹಿತ್, ವಿಜೇಂದ್ರ, ಡಿ.ವೈ.ಸುರೇಶ್, ಪ್ರತಿಮಾ, ಸುಮಾ, ಪದ್ಮರಾಜ್ ಇದ್ದರು.
Published on

ಬಣಕಲ್: ಪ್ರವಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಉಲ್ಲಾಸಗೊಂಡು ಜೀವನೋತ್ಸಾಹ ಹೆಚ್ಚುತ್ತದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಚಿಕ್ಕಮಗಳೂರು ರೆಸಾರ್ಟ್, ಹೋಂಸ್ಟೇ ಹಾಗೂ ಹೋಟೆಲ್ ಅಸೋಸಿಯೇಷನ್, ಸುಂಕಸಾಲೆ ಗ್ರಾಪಂ ಮತ್ತಿತರ ಸಂಘಟನೆಗಳಿಂದ ಸುಂಕಸಾಲೆಯಲ್ಲಿ ಆಯೋಜಿಸಿದ್ದ ಗಿಡನೆಡುವ ಕಾರ್ಯಕ್ರಮ, ವಿಶ್ವ ಪ್ರವಾಸೋದ್ಯಮ ದಿನಾಚರಣೆ, ರಾಣಿಝರಿ ಬಲ್ಲಾಳರಾಶಯನ ದುರ್ಗದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರವಾಸೋದ್ಯಮ ಇಂದು ಬೃಹತ್ತಾಗಿ ಬೆಳೆದಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರವಾಸ ಮಾಡುವುದರಿಂದ ಬದುಕಿನ ಜಂಜಾಟಗಳನ್ನು ಎದುರಿಸಲು ಮನಸ್ಸು ಸಜ್ಜಾಗುತ್ತದೆ ಎಂದರು.
ಸುಂಕಸಾಲೆ ಪಿಡಿಒ ಪದ್ಮರಾಜ್ ಮಾತನಾಡಿ, ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪ್ರವಾಸ ಮಾಡುವುದರಿಂದ ಜ್ಞಾನ ವೃದ್ಧಿ ಆಗುವುದರಿಂದ ವಿಶಾಲವಾಗಿ ಯೋಚಿಸುವ ದೃಷ್ಟಿಕೋನ ಬೆಳೆಯುತ್ತದೆ ಎಂದು ತಿಳಿಸಿದರು.
ಸುಂಕಸಾಲೆ ಗ್ರಾಪಂ ಉಪಾಧ್ಯಕ್ಷ ವಿಜೇಂದ್ರ, ಸದಸ್ಯರಾದ ಡಿ.ವೈ.ಸುರೇಶ್, ಪ್ರತಿಮಾ, ಸುಮಾ, ಪ್ರವಾಸೋದ್ಯಮ ಇಲಾಖೆಯ ಎ್ಡಿಸಿ ನಾಗರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net