ವಿಶ್ವಸಂಸ್ಥೆಯಲ್ಲಿ ಕಾಯಂ ಸ್ಥಾನಕ್ಕೆ ಭಾರತಕ್ಕೆ ಬೆಂಬಲ ನೀಡಿದ ಇಂಗ್ಲೆಂಡ್​!

unsc
Published on

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನಕ್ಕಾಗಿ ಮತ್ತೊಮ್ಮೆ ಇಂಗ್ಲೆಂಡ್​ ತನ್ನ ಬೆಂಬಲವನ್ನು ಸೂಚಿಸಿದೆ.

ವಿಶ್ವಸಂಸ್ಥೆಯ ಶಾಶ್ವತ ಸದಸ್ಯರ ಸಂಖ್ಯೆಯನ್ನು ಹೆಚ್ಚುಸುವಂತೆ ಕರೆ ನೀಡಿದ್ದ ಜರ್ಮನಿ, ಜಪಾನ್ ಮತ್ತು ಬ್ರೆಜಿಲ್‌ಗೆ ಶಾಶ್ವತ ಸ್ಥಾನ ಸಿಗಬೇಕು ಎಂದು ಪ್ರತಿಪಾದಿಸಿದೆ. ಈ ಮಾಹಿತಿಯನ್ನು ವಿಶ್ವಸಂಸ್ಥೆಯ ಇಂಗ್ಲೆಂಡ್​ ರಾಯಭಾರಿ ಬಾರ್ಬರಾ ವುಡ್‌ವರ್ಡ್ ನಿಡಿದ್ದು 'ಶಾಶ್ವತ ಸದಸ್ಯರ ಹಾಗು ಅರೆಕಾಲಿಕ ವಿಭಾಗಗಳಲ್ಲಿ ಸದಸ್ಯರ ವಿಸ್ತರಣೆಗೆ ದೀರ್ಘಕಾಲದಿಂದ ಇಂಗ್ಲೆಂಡ್​ ಬೆಂಬಲ ನೀಡಿದೆ' ಎಂದು ಅವರು ಹೇಳಿದರು.

'ನಾವು ಭಾರತ, ಜರ್ಮನಿ, ಜಪಾನ್ ಮತ್ತು ಬ್ರೆಜಿಲ್‌ಗೆ ಹೊಸ ಶಾಶ್ವತ ಸ್ಥಾನ ನೀಡುವ ಬಗ್ಗೆ ಬೆಂಬಲಿಸುತ್ತೇವೆ. ವಿಶ್ವಸಂಸ್ಥೆ ಮಂಡಳಿಯಲ್ಲಿ ಆಫ್ರಿಕನ್ನರಿಗೆ ಶಾಶ್ವತ ಪ್ರಾತಿನಿಧ್ಯವನ್ನು ನೀಡಬೇಕು' ಎಂದು ಅವರು ಗುರುವಾರ ಭದ್ರತಾ ಮಂಡಳಿಯ ಸುಧಾರಣೆಯ ಕುರಿತು ತಮ್ಮ ಭಾಷಣದಲ್ಲಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net