ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್​ಗೆ ಮುಂದಾದ ಸ್ಪೆಷಲ್ ಕಮಿಷನರ್: ಡಾ.ಸಲೀಂರಿಂದ ಹೊಸ ಪ್ಲಾನ್

Salim
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ವಿಶೇಷ ಸಂಚಾರ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಡಾ.ಸಲೀಂ ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್​ಗೆ ಹೊಸ ಪ್ಲಾನ್ ರೂಪಿಸಿದ್ದಾರೆ. ಕಳೆದ ಒಂದು ವಾರದಿಂದ ಸಿಟಿ ರೌಂಡ್ಸ್ ಹೊಡೆದು ಟ್ರಾಫಿಕ್ ಬಗ್ಗೆ ಕಮಿಷನರ್​ ಮಾಹಿತಿ ಕಲೆ ಹಾಕಿದ್ದಾರೆ.

ಹಾಗಾದ್ರೆ ಟ್ರಾಫಿಕ್ ಕಂಟ್ರೋಲ್​​ಗೆ ಸ್ಪೆಷಲ್ ಕಮಿಷನರ್ ಮಾಡಿಕೊಂಡಿರೋ ಪ್ಲಾನ್ಸ್ ಏನು? ಸಿಟಿ ರೌಂಡ್ಸ್ ವೇಳೆ ಕಮಿಷನರ್​ಗೆ ಕಂಡು ಬಂದ ಅಂಶಗಳೇನು? ನಗರದಲ್ಲಿ ಎಲ್ಲೆಲ್ಲಿ ಹೆಚ್ಚು ಟ್ರಾಫಿಕ್ ಆಗ್ತಿದೆ? ಎಂಬ ವಿಚಾರಗಳನ್ನು ಮತ್ತು ಸಿಟಿ ರೌಂಡ್ಸ್ ಹೊಡೆದ ಬಗ್ಗೆ ದಿಗ್ವಿಜಯ ನ್ಯೂಸ್ ಜೊತೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಮಾತುನಾಡಿದ್ದಾರೆ.

ಬೆಂಗಳೂರಿನಲ್ಮಿ ಮೊದಲಿನಿಂದಲೂ ಟ್ರಾಫಿಕ್ ಇದೆ. ಇವಾಗ ನಗರದಲ್ಲಿ ಹಲವು ಯೋಜನೆ ಮೇಲೆ ಕಾಮಗಾರಿ ನಡೀತಿದೆ. ಇದರಿಂದ ಟ್ರಾಫಿಕ್ ಆಗ್ತಿದೆ. ರೌಂಡ್ಸ್ ವೇಳೆ ನಗರದ ಹೃದಯ ಭಾಗಕ್ಕಿಂತಲೂ ಔಟ್ ಸ್ಕರ್ಟ್ ಅಲ್ಲಿ ಜಾಸ್ತಿ ಟ್ರಾಫಿಕ್ ಇರೋದು ಕಂಡು ಬಂತು. ಸಿಲ್ಕ್ ಬೋರ್ಡ್, ಕೆ.ಆರ್ ಪುರಂ, ಹೆಬ್ಬಾಳ, ಪೀಣ್ಯಾ ಕಡೆಯ ಔಟರ್ ರಿಂಗ್ ರೋಡ್ ಕಡೆ ಹೆಚ್ಚು ಟ್ರಾಫಿಕ್ ಇದೆ ಎಂದರು.

ಟ್ರಾಫಿಕ್ ಕೆಲಸ ಅಂದ್ರೆ ರಸ್ತೆಯಲ್ಲಿ ಕೆಲಸ ಮಾಡೋದು. ಟ್ರಾಫಿಕ್​ನ ಯಾವ ಅಧಿಕಾರಿಯಾದ್ರೂ ರಸ್ತೇಲಿ ನಿಂತು ಕೆಲಸ ಮಾಡ್ಬೇಕು. ಹಿರಿಯ ಅಧಿಕಾರಿಯಾಗಲಿ ಅಥವಾ ಕಿರಿಯ ಅಧಿಕಾರಿಯಾಗಲಿ ರಸ್ತೆಯಲ್ಲಿ ನಿಂತು ಮಾಡಿದ್ರೇನೆ ಕೆಲಸ ಆಗುತ್ತದೆ. ಕಚೇರಿಗಳು, ಸ್ಟೇಷನ್​​ನಲ್ಲಿ ಕೂತರೆ ಕೆಲಸ ಆಗಲ್ಲ. ನಮ್ಮ ಸಿಬ್ಬಂದಿ ಕೂಡ ಫೀಲ್ಡ್​ಗೆ ಇಳಿದು ಕೆಲಸ ಮಾಡ್ತಾರೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಿಂದ ಕೆಲವೆಡೆ ಟ್ರಾಫಿಕ್ ಕಿರಿಕಿರಿ ಆಗ್ತಿದೆ. ಅದಕ್ಕೆ ಜನ ಸ್ವಲ್ಪ ದಿನ ಸಹಕಾರ ನೀಡ್ಬೇಕು. ಮುಂದಿನ ದಿನಗಳಲ್ಲಿ ಟ್ರಾಫಿಕ್ ಕಂಟ್ರೋಲ್‌ಗೆ ಸಿದ್ಧತೆ ಮಾಡಿಕೊಳ್ತಿದೀನಿ ಎಂದು ದಿಗ್ವಿಜಯ ನ್ಯೂಸ್​ಗೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net