

ಬೆಂಗಳೂರು: ತುಪ್ಪದ ಬೆಡಗಿ ನಟಿ ರಾಗಿಣಿಗೆ ಶೂಟಿಂಗ್ ವೇಳೆ ಪೆಟ್ಟಾಗಿದ್ದು, ವೈದ್ಯರ ಸಲಹೆಯಂತೆ ಸದ್ಯ ಬೆಡ್ ರೆಸ್ಟ್ನಲ್ಲಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್ ಸಮಯದಲ್ಲಿ ಅವರಿಗೆ ಈ ಏಟು ಬಿದ್ದಿದೆ. ಪರಿಣಾಮವಾಗಿ, ರಾಗಿಣಿಯ ಎಡಗೈಗೆ ಪೆಟ್ಟಾಗಿದೆ.
ಚಿತ್ರವೊಂದರಲ್ಲಿ ಕಮಾಂಡೋ ಆಫೀಸರ್ ಪಾತ್ರದಲ್ಲಿ ನಟಿಸುತ್ತಿರುವ ರಾಗಿಣಿ, ಅದಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಆಗ ಆದ ಎಡವಟ್ಟಿನಿಂದ ಎಡಗೈಗೆ ಪೆಟ್ಟಾಗಿದೆ. ತಕ್ಷಣ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದು, ನಾಲ್ಕು ದಿನಗಳ ಕಾಲ ರೆಸ್ಟ್ ಪಡೆಯಲು ಹೇಳಿದ್ದಾರಂತೆ.
ಹೀಗಾಗಿ ಚೆನ್ನೈನಿಂದ ಬೆಂಗಳೂರಿಗೆ ಮರಳಿರುವ ಅವರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಕೈಯ ಮಸಲ್ ಟಿಷ್ಯೂ ರಪ್ಚರ್ ಆಗಿರುವುದಾಗಿ ಹೇಳಿಕೊಂಡಿರುವ ಅವರು ನಾಲ್ಕು ದಿನ ರೆಸ್ಟ್ ತೆಗೆದುಕೊಳ್ಳಲಿದ್ದಾರೆ. ಮಾತ್ರವಲ್ಲ ಕೈಗೆ ಪೆಟ್ಟಾಗಿ ಬ್ಯಾಂಡೇಜ್ ಧರಿಸಿರುವ ಫೋಟೋ ಕೂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.