ಬಲವರ್ಧಿತ ಅಕ್ಕಿ ವಿತರಣೆ; ಕೇಂದ್ರ ಸಚಿವ ಸಂಪುಟ ಅನುಮೋದನೆ

Rice
Published on

ನವದೆಹಲಿ: ವಿವಿಧ ಯೋಜನೆಯಡಿ ಬಲವರ್ಧಿತ ಅಕ್ಕಿ ವಿತರಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಭಾರತೀಯ ಆಹಾರ ನಿಗಮ (ಎಫ್​ಸಿಐ) ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಇಂಥ ಬಲವರ್ಧಿತ ಅಕ್ಕಿಯನ್ನು 88.65 ಲಕ್ಷ ಮೆಟ್ರಿಕ್ ಶೇಖರಿಸಿದ್ದು, ಇದನ್ನು ಮೂರು ಹಂತದಲ್ಲಿ ವಿತರಿಸಲು ಕೇಂದ್ರ ಒಪ್ಪಿಗೆ ನೀಡಿದೆ ಎಂದು ವಾರ್ತಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

  • ಬಲವರ್ಧಿತ ಅಕ್ಕಿ ವಿತರಣೆಗೆ ಸರ್ಕಾರ ಭರಿಸುವ ಮೊತ್ತ 2,700 ಕೋಟಿ ರೂ.

ಇತರ ನಿರ್ಧಾರಗಳು

  • ಅಟಲ್ ಇನೋವೇಷನ್ ಮಿಷನ್ (ಎಐಎಂ)ಮುಂದಿನ ವರ್ಷ ಮಾರ್ಚ್ ವರೆಗೆ ವಿಸ್ತರಣೆ
  • ಕಲ್ಲಿದ್ದಲು ತೆಗೆಯುವಿಕೆ ಚಾಲ್ತಿಯಲ್ಲಿ ಇಲ್ಲದ ಗಣಿಗಳನ್ನು ಯಾವುದೇ ದಂಡವಿಲ್ಲದೆ ವಾಪಸ್ ನೀಡಲು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಒಮ್ಮೆ ಅವಕಾಶ

ಎಲ್ಲೆಲ್ಲಿ ವಿತರಣೆ?

  • ಮೊದಲ ಹಂತ- ಐಸಿಡಿಎಸ್, ಪಿಎಂ ಪೋಷಣ್ ಕಾರ್ಯಕ್ರಮ
  • 2ನೇ ಹಂತ- ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಹಾಗೂ ಇತರ ಕಲ್ಯಾಣ ಕಾರ್ಯ ಕ್ರಮ- 2023 ಮಾರ್ಚ್ ಗುರಿ
  • 3ನೇ ಹಂತ-ಮೊದಲೆರಡು ಹಂತದಲ್ಲಿ ವಿತರಣೆ ಆಗದ ಎಲ್ಲ ಜಿಲ್ಲೆಯಲ್ಲೂ 2024ರ ಮಾರ್ಚ್ ಒಳಗೆ ವಿತರಿಸಲಾಗುತ್ತದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net