ಇನ್ನು ಎಲ್ಲರಿಗೂ ಲಭ್ಯ ಕೋವಿಡ್ ಬೂಸ್ಟರ್​ ಡೋಸ್​: ಯಾವತ್ತಿನಿಂದ ಶುರು?

Vaccine
Published on

ನವದೆಹಲಿ: ಈಗಾಗಲೇ ಕೆಲವು ಷರತ್ತುಗಳ ಮೇಲೆ ನೀಡಲಾಗುತ್ತಿದ್ದ ಕೋವಿಡ್ ಬೂಸ್ಟರ್ ಡೋಸ್ ಇನ್ನುಮುಂದೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಭ್ಯವಾಗಲಿದೆ. ಈ ಕುರಿತು ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.

ಹೊಸ ವೇರಿಯಂಟ್​ ಎಕ್ಸ್​ಇ ಯುಕೆನಲ್ಲಿ ಹೆಚ್ಚಾಗಿದ್ದು, ಭಾರತದಲ್ಲೂ ವರದಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕೋವಿಡ್ ಬೂಸ್ಟರ್​ ಡೋಸ್​ ವಯಸ್ಕರೆಲ್ಲರಿಗೂ ಕೊಡಲು ತೀರ್ಮಾನಿಸಿದೆ.

ಒಮಿಕ್ರಾನ್ ವೇರಿಯಂಟ್ ಕಾಣಿಸಿಕೊಂಡ ಬಳಿಕ ಬೂಸ್ಟರ್ ಡೋಸ್ ನೀಡಲು ಆರಂಭಿಸಲಾಗಿತ್ತು. ಆದರೆ ಅದು ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಸೀಮಿತವಾಗಿತ್ತು. ಇದುವರೆಗೆ ಒಟ್ಟು 2.4 ಕೋಟಿಗೂ ಅಧಿಕ ಬೂಸ್ಟರ್ ಡೋಸ್ ನೀಡಲಾಗಿದೆ. ಇದೀಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಕೊಡಲು ನಿರ್ಧರಿಸಲಾಗಿದ್ದು, ಏ.10ರಿಂದ ಬೂಸ್ಟರ್ ಡೋಸ್ ಲಸಿಕೀಕರಣ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net