ಮೂಲ ಸೌಕರ್ಯಕ್ಕೆ ಒತ್ತು

anp road work
ಆನಂದಪುರ ಸಮೀಪದ ಪತ್ರೆಹೊಂಡ ಗ್ರಾಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಖಲೀಂವುಲ್ಲಾ, ಪ್ರಕಾಶ ತಂಗಳವಾಡಿ, ಅನಿತಾಕುಮಾರಿ ಇತರರಿದ್ದರು.
Published on

ಆನಂದಪುರ: ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಅವರು ಸೋಮವಾರ ಸಮೀಪದ ಆಚಾಪುರ ಗ್ರಾಪಂ ವ್ಯಾಪ್ತಿಯ ಪತ್ರೆಹೊಂಡ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ರಸ್ತೆ, ಕುಡಿಯುವ ನೀರು, ಬೀದಿ ದೀಪ, ಬಸ್ ತಂಗುದಾಣ, ಕೆರೆ ಅಭಿವೃದ್ಧಿ ಇತ್ಯಾದಿ ಕಾಮಗಾರಿ ಬಗ್ಗೆ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದು ರಾಜ್ಯ ಸರ್ಕಾರ ಇಂತಹ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು. ಆನಂದಪುರ ಹೋಬಳಿ ಭಾಗದಲ್ಲಿ 1 ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ಮಂಜೂರು ಮಾಡಲಾಗಿದೆ. ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿದೆ ಎಂದರು. ಆಚಾಪುರ ಗ್ರಾಪಂ ಅಧ್ಯಕ್ಷ ಖಲಿಮುಲ್ಲಾ, ಸದಸ್ಯ ಪ್ರಕಾಶ ತಂಗಳವಾಡಿ, ಕಾಂಗ್ರೆಸ್ ಮುಖಂಡರಾದ ಅನಿತಾಕುಮಾರಿ, ಸೋಮಶೇಖರ ಲಾವಿಗೆರೆ, ಚೇತನ್‌ರಾಜ್ ಕಣ್ಣೂರು, ರಮಾನಂದ ಸಾಗರ್, ಮೋಹನ್ ಕುಮಾರ್, ಎನ್.ಉಮೇಶ , ರಹಮತ್ ವುಲ್ಲಾ, ಮುಕುಂದ, ರವಿಕುಮಾರ್, ಸೋಮೇಶ್, ಬಸವರಾಜ್, ಅಬ್ದುಲ್ ರಜಾಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net