ಭಾರತದ ಗಡಿ ಭದ್ರತೆಗೆ ಒತ್ತು; ಮೇ 18ರಂದು ಇಸ್ರೋದಿಂದ ಭೂ ವೀಕ್ಷಣೆ ಉಪಗ್ರಹ ಉಡಾವಣೆ| Isro

ISRO
Published on

Isro| ಭಾರತವು ಇದೇ ಭಾನುವಾರ (ಮೇ 18) ರಂದು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಇಒಎಸ್-09 ಭೂ ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಬಾಹ್ಯಾಕಾಶದಿಂದ ತನ್ನ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಉಪಗ್ರಹವಾಗಿದೆ.

ಈ ಉಪಗ್ರಹವು ಹಗಲು, ರಾತ್ರಿ ಹಾಗೂ ಯಾವುದೇ ಭೂಮಿಯ ಹವಾಮಾನದಲ್ಲಿಯೂ ಹೆಚ್ಚಿನ ರೆಸಲ್ಯುಷನ್ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ. ಇದು ರಾಷ್ಟ್ರೀಯ ಭದ್ರತೆ, ವಿಪತ್ತು ನಿರ್ವಹಣೆ, ಅರಣ್ಯ ಹಾಗೂ ಕೃಷಿ ಬಗ್ಗೆ ಮೇಲ್ವಿಚಾರಣೆ ನಡೆಸಲು ಸಹಕಾರಿಯಾಗಲಿದೆ.

ಹವಾಮಾನ ಪರಿಸ್ಥಿತಿಗಳಲ್ಲೂ ಬಾಹ್ಯಾಕಾಶದಿಂದ ಕಣ್ಣಾವಲು ನಡೆಸಲು ತನ್ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಈ ಭೂ ವೀಕ್ಷಣಾ ಉಪಗ್ರಹ ಉಡಾವಣೆ ಮಾಡಲಿದೆ. ಶ್ರೀಹರಿಕೋಟಾದಲ್ಲಿ ಇಒಎಸ್-09 ಉಪಗ್ರಹದ ಉಡಾವಣೆ ಮಾಡಲಾಗುತ್ತಿದೆ. ಇದಕ್ಕೆ ವಿಜ್ಞಾನ ಹಾಗೂ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯಲ್ಲಿರುವ ಸಂಸದರು ಸಾಕ್ಷಿಯಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net