ಅಂಬಿಗರ ಚೌಡಯ್ಯ ಚಿಂತನೆ ಅಳವಡಿಸಿಕೊಳ್ಳಿ

chowdayya
ಸೊರಬದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಕೆ.ಎಚ್.ಕೇಶವ, ಈರೇಶ್ ಮೇಸಿ, ಡಾ.ಪ್ರದೀಪ್‌ಕುಮಾರ್ ಇತರರಿದ್ದರು.
Published on

ಸೊರಬ: ಸಮ ಸಮಾಜದ ಕನಸು ಕಂಡಿದ್ದ ಅಂಬಿಗರ ಚೌಡಯ್ಯ ಚಿಂತನೆಗಳನ್ನು ಪ್ರಸ್ತುತ ದಿನಗಳಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಹೇಳಿದರು.

ತಾಲೂಕು ಪಂಚಾಯಿತಿ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಗಂಗಾಮತ ಸಮಾಜದ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.

12ನೇ ಶತಮಾನದ ಶರಣ ಪರಂಪರೆಗೆ ನಿಜವಾದ ಸ್ಥಾನಮಾನ ತಂದುಕೊಟ್ಟಿದ್ದ ಅಂಬಿಗರ ಚೌಡಯ್ಯ ಕಡುಟೀಕೆಗಳ ಮೂಲಕವೇ ಉತ್ತರವಾಗಿದ್ದರು. ಅವರ ನೇರ ಮಾತಿನ ವಚನಗಳು ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಮುನ್ನುಡಿಯಾಗಿದ್ದವು. ಬಸವಣ್ಣನವರ ಆದರ್ಶ ಮತ್ತು ತತ್ವಗಳನ್ನು ಸಾರುವತ್ತ ಸಮ ಸಮಾಜ ನಿಮಾರ್ಣ ಮಾಡಲು ಮುಂದ್ದಾಗಿದ್ದರು. ಅವರ ಆದರ್ಶಗಳನ್ನು ಯುವಪೀಳಿಗೆ ಪಾಲಿಸಬೇಕು ಎಂದರು.

ಸಮಾಜದ ಹಿರಿಯ ಮುಖಂಡ ದೇವೇಂದ್ರಪ್ಪ ಚನ್ನಾಪುರ ಮಾತನಾಡಿ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಅಂಬಿಗರ ಚೌಡಯ್ಯ ಆಚಾರ, ಸಂಪ್ರದಾಯ, ಮೌಢ್ಯ ಆವರಿಸುವುದನ್ನು ಮನಗಂಡು ನಿಷ್ಠುರವಾಗಿ ಟೀಕಿಸಿದರು. ಯುವ ಸಮಾಜ ಇಂತಹ ಮಹನೀಯರ ವಿಚಾರಗಳಿಂದ ಪ್ರೇರಣೆಗೊಂಡು ಸಮಾಜ ಪರಿವರ್ತನೆಯ ಕಾಯಕದಲ್ಲಿ ತೊಡಗಿಸಿಕೊಂಡು ಪ್ರಜ್ಞಾವಂತರಾಗಿ ಸಮಾಜವನ್ನು ಮುನ್ನಡೆಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಶಿಕ್ಷಕ ಕೆ.ಎಚ್.ಕೇಶವ ಅಂಬಿಗರ ಚೌಡಯ್ಯ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಇಒ ಡಾ.ಪ್ರದೀಪ್ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಈರೇಶಪ್ಪ, ದೇವೇಂದ್ರಪ್ಪ, ಗಂಗಾಮತ ಸಮಾಜದ ತಾಲೂಕು ಉಪಾಧ್ಯಕ್ಷ ನಾಗರಾಜಪ್ಪ, ಪರಶುರಾಮ, ನಾಗರಾಜಪ್ಪ ಶಕುನವಳ್ಳಿ, ನಿರ್ಮಾಲ, ವಿನೋದ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net