ಇತ್ತೀಚೆಗೆ ಸೆರೆ ಹಿಡಿದ್ದ ಕಾಡಾನೆ ಜೊತೆ ಕಾದಾಡಿ ಪ್ರಾಣ ಬಿಟ್ಟ ದಸರಾ ಆನೆ…

aane
Published on

ಹುಣಸೂರು: ಶ್ರೀರಂಗಪಟ್ಟಣದ ದಸರಾ ಸಂದರ್ಭ ಅಂಬಾರಿ ಹೊತ್ತು ಎಲ್ಲರ ಗಮನ ಸೆಳೆದಿದ್ದ 'ಗೋಪಾಲಸ್ವಾಮಿ' ಇನ್ನಿಲ್ಲ.

ಈ ಬಾರಿಯ ದಸರಾ ಸಂದರ್ಭ ದಸರಾ ಮಹೋತ್ಸವದ ಸಂದರ್ಭ ಜನದಟ್ಟಣೆ ಹಾಗು ಪಟಾಕಿ ಸದ್ದಿನಿಂದ ವಿಚಲಿತವಾಗಿದ್ದ ಗೋಪಾಲಸ್ವಾಮಿ ಆನೆಯನ್ನು ಕಾಡಿಗೆ ಕರೆದುಕೊಂಡು ಹೋಗಲಾಗಿತ್ತು. ಈ ಸಂದರ್ಭ ಕಾಡಾನೆ ದಾಳಿ ಮಾಡಿದೆ.

ಈ ಕಾಡಾನೆಯನ್ನು ಇತ್ತೀಚೆಗಷ್ಟೇ ಸೆರೆ ಹಿಡಿಯಲಾಗಿತ್ತು. ಇದರ ಹೆಸರು ಅಯ್ಯಪ್ಪ ಎಂದು. ಅಯ್ಯಪ್ಪ ಜೊತೆ ಸುಮಾರು ಹೊತ್ತು ಕಾದಾಡಿದ ನಂತರ ಗೋಪಾಲಸ್ವಾಮಿ ಆನೆ ಪ್ರಾಣ ಬಿಟ್ಟಿದೆ.

39 ವರ್ಷದ ಗೋಪಾಲಸ್ವಾಮಿ ಆನೆ 14 ದಸರಾ ಮಹೋತ್ಸವಗಳಲ್ಲಿ ಭಾಗಿಯಾಗಿತ್ತು. ಗೋಪಾಲಸ್ವಾಮಿ ಶಾಂತಸ್ವಭಾವದ ಆನೆಯಾಗಿದ್ದ. ಸದ್ಯ ಗೋಪಾಲಸ್ವಾಮಿ ಆನೆ ಹುಣಸೂರು ತಾಲೂಕಿನ ಮುತ್ತಿಗೋಡು ಆನೆ ಶಿಬಿರದಲ್ಲಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net