ಆನೇಕಲ್ ಗಡಿ ಭಾಗಕ್ಕೆ ಬಂದ ಕಾಡಾನೆಗಳು: ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಪರದಾಟ

elephant
Published on

ಆನೇಕಲ್: ತಾಲೂಕಿನ ವಣಕನಹಳ್ಳಿ ಮತ್ತು ಸೋಲೂರು ಭಾಗದಲ್ಲಿ ಕಾಡಾನೆಗಳ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಗಡಿ ಭಾಗದಲ್ಲಿ ಕಾಡಾನೆಗಳು ದಾಂಗುಡಿಯಿಟ್ಟಿದ್ದು, ಐದು ಕಾಡಾನೆಗಳು ನಿನ್ನೆ ರಾತ್ರಿಯಿಂದ ರೈತರ ಜಮೀನಿನಲ್ಲಿ ಓಡಾಡುತ್ತಿವೆ.

ಆನೆಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ. ಕಾಡಾನೆಗಳು ರೈತರು ಬೆಳೆದ ಬೆಳೆ ಸಂಪೂರ್ಣ ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗೆ ಓಡಿಸುತ್ತಿದ್ದಾರೆ.

ಆನೆಗಳನ್ನು ನೋಡಲು ಸಾರ್ವಜನಿಕರು ಜಮಾಯಿಸುತ್ತಿರುವುದರಿಂದ ರೈತರ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಆನೆಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net