ಇಲ್ಲಿನ ಜನ ಓಟು ಹಾಕೋದು ಬಿಜೆಪಿಗೆ, ಮೊದ್ಲು ಅವ್ರ ಸಮಸ್ಯೆ ಬಗೆಹರಿಸಿ... ಸಚಿವರಿಗೆ ಪ್ರಜ್ವಲ್​ ರೇವಣ್ಣ ಕ್ಲಾಸ್

prajwal revanna
Published on

ಹಾಸನ: ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರು ಓಟು ಹಾಕೋದು ಬಿಜೆಪಿಗೆ. ಇದನ್ನ ವೇದಿಕೆ ಮೇಲೆ ಬಹಿರಂಗವಾಗಿ ಹೇಳಲು ನನಗೆ ಭಯ ಇಲ್ಲ. ಇಲ್ಲಿನ ಜನತೆ ಬಿಜೆಪಿಗೆ ಓಟು ಹಾಕಿದ್ದಾರೆ. ಹಾಗಾಗಿ ನೀವುಗಳು ಬಿಜೆಪಿ ಸರ್ಕಾರ ಇದ್ದಾಗಲೇ ಅವರ ಸಮಸ್ಯೆ ಬಗೆ ಹರಿಸಲೇಬೇಕು ಎಂದು ಸಚಿವರತ್ತ ಸಂಸದ ಪ್ರಜ್ವಲ್ ರೇವಣ್ಣ ಮಾತಿನಲ್ಲೇ ಛಾಟಿ ಬೀಸಿದರು.

ಸಕಲೇಶಪುರ ಸೇರಿದಂತೆ ಜಿಲ್ಲೆಯ ಹಲವೆಡೆ ಕಾಡಾನೆ ದಾಳಿಗೆ ಹಲವರು ಬಲಿಯಾಗಿದ್ದಾರೆ. ಕಾಡಾನೆ ಸಮಸ್ಯೆ ಬಗೆಹರಿಸುವ ಬಗ್ಗೆ ಮಂಗಳವಾರ ಸಕಲೇಶಪುರದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಪ್ರಜ್ವಲ್​ ರೇವಣ್ಣ, ಇಲ್ಲಿನ ಜನ ನಮಗೆ ಓಟು ನೀಡದಿದ್ದರೂ ಪರವಾಗಿಲ್ಲ. ಆದ್ರೆ ಅವರ ಮನೆ ಬಾಗಿಲಿಗೆ ಹೊದಾಗ ಒಂದು ಲೋಟ ನೀರು ಮತ್ತು ಊಟ ಕೊಡ್ತಾರೆ. ಹೀಗಾಗಿ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ನಾನು ಕೈ ಜೋಡಿಸುವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಹಾಸನ ಉಸ್ತುವಾರಿ ಸಚಿವ ಕೆ .ಗೋಪಾಲಯ್ಯ ಸಮ್ಮುಖದಲ್ಲೇ ಹೇಳಿದರು. ಇದನ್ನೂ ಓದಿರಿ ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ

ಯಾರೋ ಮೂರ್ಖರು ಹೇಳ್ತಾರೆ. ಕೇಂದ್ರ ಬಜೆಟ್‌ ವೇಳೆ ಪ್ರಜ್ವಲ್ ರೇವಣ್ಣ ಸರಿಯಾಗಿ ಮಾತಾಡಿಲ್ಲ ಅದಕ್ಕೆ ಅನುದಾನ ಬಂದಿಲ್ಲ ಅಂತಾರೆ. ಆ ಮೂರ್ಖರಿಗೆ ಕೇಂದ್ರದ ಬಜೆಟ್ ಹೇಗೆ ಮಂಡನೆ ಆಗುತ್ತೆ ಅನ್ನೋದೆ ಗೊತ್ತಿಲ್ಲ ಎಂದು ಹಾಸನ ಶಾಸಕ ಪ್ರೀತಮ್ ಗೌಡ ವಿರುದ್ಧ ಪರೋಕ್ಷವಾಗಿ ಪ್ರಜ್ವಲ್​ ರೇವಣ್ಣ ವಾಗ್ದಾಳಿ ನಡೆಸಿದರು.

ನೀವು ಎರಡು ಬಾರಿ ಮಂತ್ರಿ ಇದ್ದೀರಾ. ನೀವೇ ಅವರಿಗೆ(ಪ್ರೀತಂ ಗೌಡ) ತಿಳಿಹೇಳಿ ಎಂದು ಅರಣ್ಯ ಸಚಿವ ಲಿಂಬಾವಳಿಗೆ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಎಂಪಿಯಾಗಿ ನಾವು ರಿಕ್ವೆಸ್ಟ್ ಮಾಡಿ ಧ್ವನಿ ಎತ್ತಬಹುದು. ಸಮಸ್ಯೆ ಬಗ್ಗೆ ಬಿಂಬಿಸಬಹುದು. ಆದ್ರೆ ರಾಜ್ಯ ಸರ್ಕಾರ ಪ್ರಪೋಸಲ್ ಕಳುಹಿಸದೆ ಕೆಲಸ ಆಗಲ್ಲ. ಇದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net