

ಹನಗೋಡು: ಹನಗೋಡು ಹೋಬಳಿ ಹಿಂಡುಗುಡ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಕಮಲಮ್ಮ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಸಂಘದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಎರಡೂ ಸ್ಥಾನಗಳಿಗೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯೂ ಆದ ಸಹಕಾರ ಇಲಾಖೆ ಸಿಬ್ಬಂದಿ ಉಸ್ಮಾನ್ ತಾಜ್ ಅವಿರೋಧ ಆಯ್ಕೆ ಘೋಷಿಸಿದರು.
ನಿರ್ದೇಶಕರಾದ ರಮೇಶ್, ಸುರೇಶ್, ಶಂಕರೇಗೌಡ, ಚಲುವೇಗೌಡ, ಶ್ರೀನಿವಾಸ್, ಬೀರೇಗೌಡ , ಸತೀಶ್, ಪದ್ಮಮ್ಮ, ಲಕ್ಷಮ್ಮ, ಮಹೇಶ್, ಮುಖಂಡರಾದ ಕುಮಾರ್, ರಮೇಶ್, ಶಿವಕುಮಾರ್, ರವಿಕುಮಾರ್, ರಾಜೇಗೌಡ, ಡೇರಿ ಕಾರ್ಯದರ್ಶಿ ಎಚ್.ಜೆ.ರಾಜು ಹಾಜರಿದ್ದರು.