

ಮುಂಬೈ: ಮಹಿಳೆಯರು ಮಾತ್ರವಲ್ಲದೇ ಹುಡುಗರು, ಪುರುಷರು ಕೂಡ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಇದೆ. ತಮ್ಮ ಮನೆಯಲ್ಲಿಯೂ ಮಾತನಾಡಲು ಹೆದರುತ್ತಾರೆ, ಅಂಜುತ್ತಾರೆ. ಬರಹಗಾರ್ತಿ, ನಟಿಯೂ ಆಗಿರುವ 30 ವರ್ಷದ ನಟಿ ಈಶಾ ತಮಗೆ 70 ವರ್ಷದ ವೃದ್ಧ ಕಿರುಕುಳ ನೀಡಿದ ಘಟನೆಯನ್ನು ರಿವೀಲ್ ಮಾಡಿದ್ದಾರೆ.
ನಟಿ ಹೇಳಿದ್ದೇನು?: 10 ದಿನಗಳ ಹಿಂದೆ ನನಗೆ ವ್ಯಕ್ತಿಯೊಬ್ಬ ದೈಹಿಕವಾಗಿ ಕಿರುಕುಳ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿ ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ ನನ್ನನ್ನು ಎಳೆದು ದೇಹ ಸ್ಪರ್ಶಿಸಿದ್ದಾನೆ. ಈ ಘಟನೆಯ ನಂತರ ನಾನು ಖಿನ್ನತೆ ಜಾರಿದ್ದೆ. ನಾನು ಶಾಕ್ನಲ್ಲಿದ್ದೆ. ರಾತ್ರಿ ನಿದ್ರಿಸಲಾದೆ, ಹಗಲು ಹೆಚ್ಚು ಮಲಗುತ್ತಾ ನನ್ನ ದಿನಚರಿಯೇ ಏರುಪೇರಾಗಿತ್ತು. ಕೈಗಳು ನಡುಗುತ್ತಿದ್ದವು. ಈ ಘಟನೆಯಿಂದ ಹೊರಕ್ಕೆ ಬರಲು ತುಂಬಾ ದಿನಗಳೇ ಬೇಕಾದವು. ಇದರಿಂದ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದೆ. ಅಂದು ನನ್ನೊಂದಿಗಿದ್ದ ಗೆಳತಿ ಬಿಟ್ಟು ಬೇರೆ ಯಾರೂ ಗಮನಿಸಲಿಲ್ಲ. ಆದರೆ ಅವಳೂ ಕೂಡಾ ನನ್ನೊಂದಿಗೆ ಶಾಕ್ ಆಗಿದ್ದಳು. ತಾವು 7 ವರ್ಷದವಳಾಗಿದ್ದಾಗ ಇಂಥದ್ದೇ ಘಟನೆ ಸಿನಿಮಾ ಥಿಯೇಟರ್ನಲ್ಲಿ ನಡೆದಿತ್ತು. ಆ ಮುಖ ಈಗಲೂ ನೆನಪಾದರೆ ಭಯವಾಗುತ್ತದೆ. ತುಂಬಾ ಗಾಬರಿಯಿಂದ ಇದ್ದೆ. ಈ ದಿನಗಳನ್ನು ದಾಟಿ ಇದನ್ನ ಬರೆಯುವ ಧೈರ್ಯ ಮಾಡಿದ್ದೇನೆ ಎಂದು ನಟಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅನೇಕ ಅಭಿಮಾನಿಗಳು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾ ಧೈರ್ಯವಾಗಿರಬೇಕೆಂದು ನಾನು ಬಯಸುತ್ತೇನೆ. ನೀವು ಧರ್ಯವಾಗಿರಿ ಎಂದು ಕಾಮೆಂಟ್ ಮಾಡುವ ಮೂಲಕವಾಗಿ ನಟಿಗೆ ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.
ನೀರ್ಜಾ, ಎ ಚೀಟ್ ಡೇ, ನೋ ಲ್ಯಾಂಡ್ಸ್ ಮ್ಯಾನ್, ಅಫ್ವಾ, ನೀರಜ್, ನೋ ಒನ್ ಕಿಲ್ಡ್ ಜೆಸ್ಸಿಕಾ, ಅಲಿಘರ್, ಮಾಮಾಸ್ ಬಾಯ್ಸ್, ಪರಚಾಯಿನಂತ ಹಲವು ಚಿತ್ರಗಳಲ್ಲಿ ನಟಿಸಿರುವ ಈಶಾ, ಪ್ರಸಿದ್ಧ ಬರಹಗಾರ್ತಿಯೂ ಆಗಿದ್ದಾರೆ.