ಹೃದಯಾಘಾತಕ್ಕೀಡಾಗಿ ಎಂಟು ತಿಂಗಳ ಮಗು ಸಾವು; ಆರೋಗ್ಯ ಸಚಿವರಿಗೆ ದೂರು

Child (4)
Published on

ಕೊಟ್ಟಾಯಂ: ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಅದರಿಂದ ಸಾಯುವವರ ಸಂಖ್ಯೆಯೂ ಅಧಿಕವಾಗಿದೆ. ಎಂಟು ತಿಂಗಳ ಮಗು ಕೂಡ ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ವರದಿಯಾಗಿದ್ದು, ಆ ಸಂಬಂಧ ಆರೋಗ್ಯ ಸಚಿವರಿಗೂ ದೂರು ಸಲ್ಲಿಕೆ ಆಗಿದೆ.

ಕೇರಳದ ಮನಾರ್ಕಾಡ್​ನ ಪಥಝಕುಝಿಯ ಸ್ಥಳೀಯ ನಿವಾಸಿ ಎಬಿ-ಜಾನ್ಸಿ ದಂಪತಿಯ ಪುತ್ರ ಜೋಶ್​ ಸಾವಿಗೀಡಾದ ಮಗು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದಲ್ಲಿ ಈ ಪ್ರಕರಣ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ಈ ಮಗುವನ್ನು ಮೇ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮೇ 29ರಂದು ಐಸಿಯುಗೆ ದಾಖಲಿಸಲಾಗಿತ್ತು. ಚುಚ್ಚುಮದ್ದು ನೀಡುವುದರಿಂದ ಮಗುವಿಗೆ ಹೃದಯಾಘಾತ ಉಂಟಾಗುವ ಅಪಾಯವಿದೆ ಎಂದು ಗೊತ್ತಿದ್ದರೂ ಅದಕ್ಕೆ ಹೆಚ್ಚಿನ ತೀವ್ರತೆಯ ಇಂಜೆಕ್ಷನ್ ನೀಡಲಾಗಿದೆ. ಆ ಬಳಿಕ ಸೂಕ್ತ ಗಮನ ಹರಿಸದ್ದರಿಂದ ಮಗು ಉಸಿರಾಟದ ಸಮಸ್ಯೆಗೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಗುವಿನ ಕುಟುಂಬಸ್ಥರು ಅಲ್ಲಿನ ಆರೋಗ್ಯ ಸಚಿವರಿಗೂ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net