ಎಂಟು ಲಕ್ಷ ರೈತರಿಗೆ ಸಿಕ್ಕಿಲ್ಲ ಮಧ್ಯಂತರ ಬರ ಪರಿಹಾರ

Drought
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಬರದಿಂದಾದ ನಷ್ಟಕ್ಕೆ ನಾಲ್ಕು ತಿಂಗಳ ಬಳಿಕ ಪರಿಹಾರ ಪಡೆಯಲು ಮುಂದಾಗಿದ್ದ 8 ಲಕ್ಷ ರೈತರಿಗೆ ಆಘಾತ ಎದುರಾಗಿದೆ. ಫ್ರೂಟ್ಸ್ ಐಡಿ, ಆಸ್ತಿ ಹಕ್ಕಿನ ತಾಂತ್ರಿಕ ಸಮಸ್ಯೆ ಪರಿಹಾರ ವಿತರಣೆಗೆ ತೊಡಕಾಗಿ ಪರಿಣಮಿಸಿದೆ. ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫೂ›ಟ್ಸ್) ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ.

ಆಸ್ತಿ ದಾಖಲೆ ಸಮಸ್ಯೆ: ಮಳೆ ಕೊರತೆ, ತೀವ್ರ ಬರದಿಂದಾಗಿ ರೈತರು ಮಧ್ಯಂತರ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೀಗ ಕೆಲ ಕಾನೂನು ತೊಡಕು, ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗಿರುವುದು, ಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದು, ಆಸ್ತಿ ದಾಖಲೆ ಸಮಸ್ಯೆಯಿಂದ ಯಾರಿಗೆ ಪರಿಹಾರ ವಿತರಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಬಹುತೇಕ ಕುಟುಂಬಗಳ ಆಸ್ತಿಯ ಮಾಲೀಕರು ಎಂದೋ ಮೃತರಾಗಿದ್ದಾರೆ. ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆಯೂ ಆಗಿಲ್ಲ.

ಮುಂದಿನವಾರ ನೆರವು ನಿರೀಕ್ಷೆ: ಈಗಾಗಲೇ ರಾಜ್ಯ ಸರ್ಕಾರ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರದಿಂದಾಗಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೊಷಿಸಿದೆ. ಅಲ್ಲದೆ, 48.19 ಲಕ್ಷ ಹೆಕ್ಟೇರ್​ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್​ಡಿಆರ್​ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ. ಪರಿಹಾರ ನೀಡುವಂತೆ 2023 ಸೆಪ್ಟೆಂಬರ್​ನಲ್ಲಿ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಬಳಿಕ 2023 ಅಕ್ಟೋಬರ್​ನಲ್ಲಿ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ. ಕೇಂದ್ರ ಸರ್ಕಾರದ ಪರಿಹಾರ ಮುಂದಿನ ವಾರ ಬಿಡುಗಡೆಗೊಳ್ಳುವ ನಿರೀಕ್ಷೆ ಇದ್ದು, ಮಧ್ಯಂತರವಾಗಿ ರಾಜ್ಯ ಸರ್ಕಾರ 34 ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ ತಲಾ 2,000 ರೂ. ನೀಡುತ್ತಿದೆ. ಆದರೆ, ದಾಖಲೆಗಳ ಸಮಸ್ಯೆ, ಫ್ರೂಟ್ಸ್ ಐಡಿ ಕಗ್ಗಂಟು ಫಲಾನುಭವಿಗಳಿಗೆ ತೊಡಕಾಗಿದೆ.

ಸಮಸ್ಯೆಗೆ ಏನು ಕಾರಣ?: ಸಾವಿರಾರು ರೈತ ಕುಟುಂಬದಲ್ಲಿ ಕದನ ್ಝೂರ್ವಜರ ಹೆಸರಲ್ಲೇ ಆಸ್ತಿ ಉಳಿದಿದೆ ್ಝಸ್ತಿ ಹಕ್ಕುದಾರರಿಗಷ್ಟೇ ಪರಿಹಾರ ನೀಡಿಕೆ ್ಝಸ್ತಿ ಹಂಚಿಕೆಗಾಗಿ ಕುಟುಂಬದಲ್ಲಿ ಗಲಾಟೆ ್ಝೕಗಾಗಿ ಹಲವರು ಫೂಟ್ಸ್ ಐಡಿ ಮಾಡಿಲ್ಲ ್ಝ್ರತಿ ಗ್ರಾಪಂನಲ್ಲಿ ಇಂತಹ ಕನಿಷ್ಠ 30 ಕೇಸ್ ಇವೆ ್ಝಬ್ಬರೇ ಹಕ್ಕುದಾರರಿರುವೆಡೆ ಸಮಸ್ಯೆ ಇಲ್ಲ ್ಝಬ್ಬರಿಗಿಂತ ಹೆಚ್ಚು ಹಕ್ಕುದಾರರಿದ್ದರೆ ಸಮಸ್ಯೆದಾರರಿಗೆ ಪರಿಹಾರ ಕೊಡಬೇಕೆಂಬ ಗೊಂದಲ

ಮಾಹಿತಿ ಸಂಗ್ರಹ ನಿರ್ಲಕ್ಷ್ಯ: ಫೂ›ಟ್ಸ್ ಡೇಟಾಬೇಸ್​ನಲ್ಲಿ 8 ಲಕ್ಷ ರೈತರ ಮಾಹಿತಿಯೇ ಇಲ್ಲ. ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿ ಮತ್ತೆ ದಾಖಲಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ರೈತರ ಆರೋಪ.

ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ ತಲಾ 2 ಸಾವಿರ ರೂ.ನಂತೆ ಜಿಲ್ಲೆಯ 3.75 ಲಕ್ಷ ರೈತರಿಗೆ 69.21 ಕೋಟಿ ರೂ. ಪರಿಹಾರ ನೀಡಲಾಗಿದೆ. ವಾರಸಾ, ದಾಖಲೆ ಇತರ ಸಮಸ್ಯೆ ಕಾಡುತ್ತಿದೆ. ಇದನ್ನು ಪರಿಹರಿಸುವಂತೆ ಕೃಷಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

| ನಿತೇಶ ಪಾಟೀಲ ಬೆಳಗಾವಿ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net