ಈದ್ ಉಲ್ ಫಿತ್ರ್​ ಆಚರಣೆ ಸೋಮವಾರ: ಮರ್ಕಝಿ ಕಮಿಟಿ ಘೋಷಣೆ

Eid-moon
Published on

ಬೆಂಗಳೂರು: ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮವಾರ ಆಚರಿಸಲು ಮರ್ಕಝಿ ರುಯಾತ್​ ಏ ಹಿಲಾಲ್ ಕಮಿಟಿ ತೀರ್ಮಾನಿಸಲಾಗಿದೆ. ಇಂದು ಚಂದ್ರ ಕಾಣಿಸದೇ ಇರುವ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಮಿಟಿಯ ಸದಸ್ಯ ಮೌಲಾನಾ ಮಕ್ಸೂದ್​ ಇಮ್ರಾನ್ ರಷ್ದಿ ಸಾಹೇಬ್ ತಿಳಿಸಿದ್ದಾರೆ.

ಬೆಂಗಳೂರಿನ ಕನ್ನಿಂಗ್​ಹ್ಯಾಂ ರಸ್ತೆಯಲ್ಲಿರುವ ದಾರ್ ಉಲ್ ಔಕಫ್ ನಲ್ಲಿ ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್​ ರಷ್ದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಮಿಟಿ ಸಭೆ ಈ ತೀರ್ಮಾನ ತೆಗೆದುಕೊಂಡಿದೆ. ಬೆಂಗಳೂರು ಮತ್ತು ಸುತ್ತಮುತ್ತ, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಬೀದರ್, ಹರಿಹರ, ಚಿಕ್ಕಮಗಳೂರು, ಬಾಳೆಹೊನ್ನೂರು ರಾಯಚೂರು, ಗದಗ, ಮೈಸೂರು ಮತ್ತು ತುಮಕೂರುಗಳಲ್ಲಿ ಶನಿವಾರ ಚಂದ್ರ ಗೋಚರಿಸದೇ ಇರುವ ಕಾರಣ ಕಮಿಟಿ ಸದಸ್ಯರೆಲ್ಲರೂ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.

ರಾಜ್ಯದ ಹೊರತಾಗಿಯೂ ದೆಹಲಿ, ಮೇವತ್, ಭೋಪಾಲ್, ಗೋಧ್ರಾ, ಗುಜರಾತ್, ಮುಂಬೈ, ಅಲಹಾಬಾದ್, ಚೆನ್ನೈ, ಪಾಲಂಪುರ, ಕಾನ್ಪುರ, ಜುನಾಪುರ, ಲಖನೌ, ಹೈದರಾಬಾದ್​, ದೇವಬಂದ್ ಮತ್ತು ಇತರೆ ಪ್ರದೇಶಗಳಲ್ಲೂ ಚಂದ್ರ ಗೋಚರಿಸಿಲ್ಲ. ಹೀಗಾಗಿ ಎಲ್ಲ ಉಲೇಮಾಗಳೂ ಸೇರಿ ಸೋಮವಾರ ಮೇ 25ರಂದು ಈದ್ ಉಲ್ ಫಿತ್ರ್ ಆಚರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮೌಲಾನಾ ಮಕ್ಸೂದ್ ಇಮ್ರಾನ್ ರಷ್ದಿ ಸಾಹೇಬ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net