ಹೊಸಬಟ್ಟೆ ತೊಟ್ಟು ಮಕ್ಕಳ ಸಂಭ್ರಮ

16ald 1 ed milad
ಆಲ್ದೂರಿನಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಯಿತು.
Published on

ಆಲ್ದೂರು: ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಮೆರವಣಿಗೆ ನಡೆಸಿದರು. ಮುಖ್ಯರಸ್ತೆಯ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣದ ಮೂಲಕ ಾರೆಸ್ಟ್ ಗೇಟ್‌ವರೆಗೆ ಸಾಗಿ ಜಮಿಯಾ ಮಸೀದಿಯಲ್ಲಿ ಮುಕ್ತಾಯಗೊಂಡಿತು. ವಿವಿಧ ಮಸೀದಿಗಳ ಮೌಲ್ವಿಗಳು, ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಗುಲ್ಲನ್‌ಪೇಟೆ, ಹಾಂದಿ, ಸಂಗಮೇಶ್ವರ ಪೇಟೆಯಲ್ಲೂ ಈದ್ ಮಿಲಾದ್ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು. ಪಟ್ಟಣದಲ್ಲಿ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳನ್ನು ಮೇದರ ಬೀದಿ ರಸ್ತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net