ಹಕ್ಕಿಯ ಹೊಟ್ಟೆಯಿಂದ ಹೊರಬಂದ ಈಲ್ ಮೀನು; ಭಯಾನಕ ಫೋಟೋ ಸಿಕ್ಕಾಪಟ್ಟೆ ವೈರಲ್​!Snake Eel

Snake Eel
Published on

Snake Eel | ಪ್ರಕೃತಿಯ ಮಡಿಲಿನಲ್ಲಿ ನಾವು ಕಂಡರಿಯದ ಅನೇಕ ಅಚ್ಚರಿಗಳಿವೆ. ಕೆಲವೊಂದು ನಮ್ಮ ಊಹಿಕೆಗೆ ಮೀರಿ ವಿಸ್ಮಯ ನಡೆಯುತ್ತದೆ. ಪ್ರತಿಯೊಂದು ಜೀವಿಯೂ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇನ್ನೊಂದು ಜೀವಿಯನ್ನು ಅವಲಂಬಿಸಲೇ ಬೇಕು. ಸಹಜವಾಗಿ ಮಾನವನು ಸಸ್ಯ, ಪ್ರಾಣಿಗಳನ್ನು ತಿಂದರೆ, ಪಕ್ಷಿ ಹುಳ ಹುಪ್ಪಟೆ, ಕೀಟ ಸೇರಿದಂತೆ ಮೀನುಗಳನ್ನು ಬೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಹೀಗೆ ಕೆಲವೊಮ್ಮೆ ಪ್ರಾಣಿ ಪಕ್ಷಿಗಳು ಬೇಟೆಯಾಡುವ ಅಪರೂಪದ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದೀಗ ಅಂತದ್ದೊಂದು ಪೋಟೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸುಂದರವಾದ ಫೋಟೋಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರು ನಿಪುಣರು. ಇವರು ಹಿಡಿದ ಹೆಚ್ಚು ಸೊಗಸಾದ, ಅದ್ಭುತವಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್​​ ಆಗುತ್ತವೆ. ಹಾಗೆಯೇ ವೈರಲ್​​ ಆಗಿರುವ ಫೋಟೋ ಆಕಾಶದಲ್ಲಿ ಹೆರಾನ್ ಹಕ್ಕಿಯೂ ಹಾರುತ್ತಿರುವಾಗ ಅದರ ಹೊಟ್ಟೆಯನ್ನು ಸೀಳಿಕೊಂಡು ಸ್ನೇಕ್​ ಈಲ್​​ ಹೊರ ಬಂದಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್​ ಆಗ್ತಿದ್ದಂತೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಅದರಂತೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಈಲ್ ಮೀನನ್ನು ತಿಂದ ಹೆರಾನ್ ಹಕ್ಕಿಯೊಂದು ಆಕಾಶಕ್ಕೆ ಹಾರಿದ್ದು, ಆದರೆ ಆ ಮೀನು ಹಕ್ಕಿಯ ಹೊಟ್ಟೆಯನ್ನು ಸೀಳಿ ಹೊರ ಬಂದಿರುವ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ..

Nature is Amazing ಹೆಸರಿನಲ್ಲಿನ X(ಈ ಹಿಂದಿನ ಟ್ವಿಟರ್​) ಅಕೌಂಟ್​​ನಲ್ಲಿ ಈ ಫೋಟೋ ಶೇರ್​​​ ಮಾಡಲಾಗಿದೆ. ಈ ಫೋಟೋದಲ್ಲಿ ಹೆರಾನ್ ಹಕ್ಕಿ ತನ್ನ ಎರಡು ಕಾಲುಗಳನ್ನು ಹಿಂದಕ್ಕೆ ಎತ್ತಿ ಹಾರುತ್ತಿರುವಾಗ ಈಲ್ ಮೀನೊಂದು ಅದರ ಹೊಟ್ಟೆ ಸೀಳಿ ಹೊರ ಬಂದ ಅದ್ಭುತ ಕ್ಷಣವನ್ನು ಛಾಯಾಗ್ರಾಹಕರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..

ನೆಟ್ಟಿಗರು ಈ ಪೋಸ್ಟ್​​​ಗೆ ಅದ್ಭುತವಾದ ಕಾಮೆಂಟ್​ಗಳನ್ನು​​ ಮಾಡಿದ್ದಾರೆ. ಈ ಪೋಸ್ಟ್ ಇದೀಗ 35.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಒಬ್ಬ ನೆಟ್ಟಿಗ ‘ಈ ಅದ್ಭುತ ದೃಶ್ಯ ಸೆರೆ ಹಿಡಿದ ಕ್ಯಾಮೆರಾ ಮ್ಯಾನ್​ಗೆ ನನ್ನದೊಂದು ಸೆಲ್ಯೂಟ್‘ ಎಂದಿದ್ದಾರೆ.

ಮತ್ತೊಬ್ಬರು ಈ ಫೋಟೋವನ್ನು ನೋಡಿದ ಮೇಲೂ ನಂಬಲು ಅಸಾಧ್ಯವೆನಿಸುತ್ತಿದೆ. ಹಕ್ಕಿ ಹೊಟ್ಟೆ ಸೇರಿದ್ದರೂ ಮೀನಿಗೆ ಬದುಕಬೇಕೆಂಬ ಆಸೆ ಎಷ್ಟಿದೆ ಎಂದು ಇದು ತೋರಿಸುತ್ತಿದೆ’ ಎಂದು ಕಾಮೆಂಟ್​​​ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net