ಖಾದ್ಯ ತೈಲ ಬೆಲೆ ಇಳಿಕೆ ಸಾಧ್ಯತೆ

Edible oil
Published on

ನವದೆಹಲಿ: ಆಮದು ಸುಂಕ ಇಳಿಕೆಯಿಂದ ಆಗಲಿರುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಖಾದ್ಯ ತೈಲ ಉದ್ಯಮದ ಸಂಘಟನೆಗಳಿಗೆ ಕೇಂದ್ರ ಆಹಾರ ಇಲಾಖೆ ನಿರ್ದೇಶನ ನೀಡಿದೆ.

ಆಹಾರ ಹಣದುಬ್ಬರ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಚ್ಚಾ ಖಾದ್ಯತೈಲಗಳ ಆಮದು ಸುಂಕವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಅರ್ಧಕ್ಕರ್ಧ ಇಳಿಸಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಾದ್ಯ ತೈಲ ಉದ್ಯಮಿಗಳಿಗೆ ಈ ಸೂಚನೆ ನೀಡಲಾಗಿದೆ.

ಇದಕ್ಕೆ ಪೂರಕವಾಗಿ ಉದ್ಯಮಿಗಳು ತಮ್ಮ ಉತ್ಪನ್ನಗಳ ಪ್ರೖೆಸ್ ಟು ಡಿಸ್ಟ್ರಿಬ್ಯೂಟರ್ಸ್ (ಪಿಟಿಡಿ) ಮತ್ತು ಗರಿಷ್ಠ ಮಾರಾಟ ದರ (ಎಂಆರ್​ಪಿ) ಕೂಡಲೇ ಹೊಂದಾಣಿಕೆ ಮಾಡಲಿದ್ದಾರೆ. ಬ್ರ್ಯಾಂಡ್​ವಾರು ಎಂಆರ್​ಪಿಯ ಪಟ್ಟಿಯನ್ನು ಪ್ರತಿ ವಾರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಕಚ್ಚಾ ಖಾದ್ಯ ತೈಲಗಳ ಮೂಲ ಆಮದು ಸುಂಕವನ್ನು (ಬೇಸಿಕ್ ಕಸ್ಟಮ್್ಸ ಡ್ಯೂಟಿ- ಬಿಸಿಡಿ) ಕೇಂದ್ರವು ಶೇ. 20ರಿಂದ ಶೇ. 10ಕ್ಕೆ ಇಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net