ಕಾಂಗ್ರೆಸ್ ಶಾಸಕನ ಮೇಲೆ ಇಡಿ ದಾಳಿ; ಐಷಾರಾಮಿ ಕಾರು, ಆಭರಣಗಳು ಮತ್ತು ನಗದು ವಶ

Untitled design - 2023-07-31T135857.311
Published on

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿರುವ ಆರೋಪದಡಿ ಕಾಂಗ್ರೆಸ್‌ನ ಹರಿಯಾಣ ಶಾಸಕ ಧರಂ ಸಿಂಗ್ ಚೋಕ್ಕರ್ ನಿವಾಸ ಮತ್ತು ಅವರ ಒಡೆತನದ ಸಂಸ್ಥೆಗಳ ಮೇಲೆ ಇಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

ದಾಳಿಯಲ್ಲಿ ನಾಲ್ಕು ಐಷಾರಾಮಿ ಕಾರುಗಳು, 14.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 4.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಇಲಾಖೆ ಮಾಹಿತಿ ನೀಡಿದೆ. ಸಾಯಿ ಐನಾ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ (ಪ್ರಸ್ತುತ ಮಹಿರಾ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್) ಸೇರಿದ ಸಮಲ್ಖಾ, ಗುರುಗ್ರಾಮ್ ಮತ್ತು ದೆಹಲಿಯ ಹನ್ನೊಂದು ಸ್ಥಳಗಳು ಮತ್ತು ಚೋಕರ್ ಮಾಲೀಕತ್ವದ ಮಹಿರಾ ಗ್ರೂಪ್‌ನ ಇತರ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.

"ಶಾಸಕ ಚೋಕ್ಕರ್ ಸೇರಿದಂತೆ ಅವರ ಪುತ್ರರಾದ ಸಿಕಂದರ್ ಸಿಂಗ್ ಮತ್ತು ವಿಕಾಸ್ ಚೋಕರ್ ಮತ್ತು ಇತರ ಪ್ರಮುಖ ಉದ್ಯೋಗಿಗಳು ನಾವು ನಡೆಸಿದ ದಾಳಿಯ ವೇಳೆ ಸಿಕ್ಕಿಲ್ಲ. ಇಲ್ಲಿಯವರೆಗೆ ತನಿಖೆಗೆ ಹಾಜರಾಗಿಲ್ಲ" ಎಂದು ಸಂಸ್ಥೆ ಆರೋಪಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net