ಶಾರೂಖ್ ಖಾನ್​ ಫ್ಯಾನ್ಸ್​​ಗೆ ಇದು ಸಂತಸದ ಸುದ್ದಿ!

Untitled design - 2023-07-31T132105.053
Published on

ಮುಂಬೈ: ಬಾಲಿವುಡ್​​ನ ಕಿಂಗ್​ ಖಾನ್​ ನಟ ಶಾರೂಖ್ ಖಾನ್​ ಅಭಿನಯದ ಬಹುನಿರೀಕ್ಷಿತ 'ಜವಾನ್‌' ಚಿತ್ರದ ಕುರಿತು ಅವರ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಹೆಚ್ಚುತ್ತಿದ್ದು, ಈ ಮಧ್ಯೆ ಚಿತ್ರತಂಡ ಇದೀಗ ಹೊಸ ಹಾಡನ್ನು ಬಿಡುಗಡೆಗೊಳಿಸುವ ಮುಖೇನ ಫ್ಯಾನ್ಸ್​ಗೆ ಸಂತಸ ನೀಡಿದೆ.

ಚಿತ್ರದಲ್ಲಿ ಶಾರುಖ್ ಖಾನ್​ಗೆ ಜೋಡಿಯಾಗಿ ನಯನತಾರಾ ನಟಿಸಿದ್ದು, ಈ ಚಿತ್ರ ಬಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡಲಿದೆ ಎಂದು ಹೆಚ್ಚಿನ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. ಸಿನಿಮಾಗೆ ಸಂಗೀತ ಸಂಯೋಜಿಸಿರುವ ಅನಿರುದ್ಧ್ ರವಿಚಂದರ್, ಎಸ್​​ಆರ್​ಕೆ ಅಭಿಮಾನಿಗಳಿಗೆ ಇದೀಗ ಹೊಸ ಅಪ್ಡೇಟ್​ ನೀಡಿದ್ದಾರೆ. ಚಿತ್ರದ ಮೊದಲ ಹಾಡನ್ನು ಇಂದು ಮಧ್ಯಾಹ್ನ 12:50ಕ್ಕೆ ಬಿಡುಗಡೆಗೊಳಿಸಿದ್ದು, ಹಿಂದಿ ಭಾಷೆಯಲ್ಲಿ 'ಜಿಂದಾ ಬಂದಾ' ಮತ್ತು ತೆಲುಗಿನಲ್ಲಿ 'ಧುಮ್ಮೆ ಧೂಳಿಪೇಲಾ' ಎಂಬ ಟೈಟಲ್​​ನಲ್ಲಿ​ ರಿಲೀಸ್​ ಮಾಡಲಾಗಿದೆ.

ಅಟ್ಲೀ ಕುಮಾರ್​ ಬರೆದು ನಿರ್ದೇಶಿಸಿರುವ ಬಿಗ್​ ಬಜೆಟ್ ಚಿತ್ರವನ್ನು ಗೌರಿ ಖಾನ್​ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜವಾನ್ ಇದೇ ಸೆಪ್ಟೆಂಬರ್ 7, 2023 ರಂದು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net