ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಸಿದ ಇಡಿ | Robert Vadra

Robert Vadra
Published on

Robert Vadra: ಕಾಂಗ್ರೆಸ್​ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್​ ವಾದ್ರಾ ಸೇರಿ 10 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ.

PMLA ಪ್ರಕರಣದ ಅಡಿ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಕೆ ಮಾಡಲಾಗಿದೆ. ಹರಿಯಾಣದ ಗುರುಗ್ರಾಮ ಬಳಿಯ ಶಿಕೋಪುರದಲ್ಲಿ 3.53 ಎಕರೆ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಬರ್ಟ್ ವಾದ್ರಾ ಮತ್ತು ಅವರಿಗೆ ಸಂಬಂಧಪಟ್ಟ 37.67 ಕೋಟಿ ರೂ. ಮೌಲ್ಯದ 43 ಸ್ಥಿರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡು, 10 ಜನರ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಸಿದೆ.

2018ರಲ್ಲಿ ಗುರುಗ್ರಾಮ್​ ಪೊಲೀಸರು ದಾಖಲಿಸಿದ್ದ ಎಫ್​ಐಆರ್ ಆಧರಿಸಿ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು, ಬುಧವಾರ (ಜು.16) ತಾತ್ಕಾಲಿಕವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 2008ರಲ್ಲಿ ಓಂಕಾರೇಶ್ವರ ಪ್ರಾಪರ್ಟಿಸ್ ಪ್ರವೈಟ್ ಲಿಮಿಟೆಡ್​​​​​​​​​​​​​​​​​​​​​​​ನಿಂದ 3.53 ಎಕರೆ ಭೂಮಿ ಖರೀದಿಸಿದ್ದ ರಾಬರ್ಟ್ ವಾದ್ರಾ ಒಡೆತನದ ಕಂಪನಿ. ಸುಳ್ಳು ಪ್ರಮಾಣಪತ್ರಗಳ ಮೂಲಕ ಭೂಮಿ ಖರೀದಿಸಿದ್ದು, ಪ್ರಭಾವದಿಂದ ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಸಿಕೊಂಡಿದ್ದಾರೆ ಎಂಬ ಆರೋಪ ರಾಬರ್ಟ್ ವಾದ್ರಾ ವಿರುದ್ಧ ಕೇಳಿಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net