

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರ್ಕೆಟ್, ಡಿಜಿಟಲ್ ಅರೆಸ್ಟ್ ಸೇರಿ ವಿವಿಧ ಮಾದರಿ ಸೈಬರ್ ವಂಚನೆ ಮಾಡುತ್ತಿದ್ದ 8 ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಬೆಂಗಳೂರಿನ ಎಂ.ಶಶಿಕುಮಾರ್ (25), ಎಂ.ಸಚಿನ್ (26), ಎಸ್.ಕೆ.ಕಿರಣ್ (25) ಮತ್ತು ಸಿ.ಚರಣ್ ರಾಜ್ (26) ಹಾಗೂ ತಮಿಳರಸನ್, ಆರ್.ಪ್ರಕಾಶ್, ಆರ್.ಅಜಿತ್ ಮತ್ತು ಅರವಿಂದನ್ ಹಾಗೂ 24 ನಕಲಿ ಕಂಪನಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ವಂಚನೆಗೆ ತೆರೆದಿದ್ದ ಸೈಬರ್‌ೆರೆಸ್ಟ್ ಟೆಕ್ನಾಲಜಿ ಪ್ರೈ.ಲಿ. ಕಂಪನಿ ಹೆಸರಿನ ಬ್ಯಾಂಕ್ ಖಾತೆಯಲ್ಲಿ 2.81 ಕೋಟಿ ರೂ. ಜಪ್ತಿ ಮಾಡಲಾಗಿದೆ. ಅಲ್ಲದೆ, ಮೊಬೈಲ್, ನಕಲಿ ಕಂಪನಿಗಳ ಚೆಕ್‌ಬುಕ್, ಕಂಪನಿ ಸೀಲ್, ಡೆಬಿಟ್ ಕಾರ್ಡ್ ಇನ್ನಿತರ ಡಿಜಿಟಲ್ ಸಾಕ್ಷಾೃಧಾರಗಳನ್ನು ಇಡಿ ವಶಕ್ಕೆ ಪಡೆದಿದೆ. ಬಂಧಿತರ ವಿರುದ್ಧ 159 ಕೋಟಿ ರೂ. ವಂಚನೆ ಆರೋಪವಿದ್ದು, ಈ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ೇಸ್‌ಬುಕ್, ಇನ್‌ಸ್ಟಾ ಗ್ರಾಂ, ಟೆಲಿಗ್ರಾಂ, ವಾಟ್ಸ್‌ಆ್ಯಪ್‌ಗಳಲ್ಲಿ ಅಮಾಯಕರಿಗೆ ಬಲೆಬೀಸುತ್ತಿದ್ದರು. ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಜಾಹೀರಾತು ನೀಡುತ್ತಿದ್ದರು. ಲಿಂಕ್ ಮೇಲೆ ಕ್ಲಿಕ್ ಮಾಡುವವರ ಮೊಬೈಲ್ ನಂಬರ್ ಅನ್ನು ಟೆಲಿಗ್ರಾಂ ಅಥವಾ ವಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರಾಗಿ ಮಾಡಿ ಬಳಿಕ ಆ್ಯಪ್ ಡೌನ್‌ಲೋಡ್ ಮಾಡಿಸಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದರು. ಇದಲ್ಲದೆ, ಮುಂಬೈ ಪೊಲೀಸ್, ಸಿಬಿಐ, ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದಾಗಿ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ಬಳಿಕ ತನಿಖೆ ನೆಪದಲ್ಲಿ ಕೋಟ್ಯಂತರ ರೂ. ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದರು. ಇದೇ ರೀತಿಯಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸ್ಥಳೀಯ ಠಾಣೆಗಳಲ್ಲಿ ಸೈಬರ್ ಕ್ರೈಂ ಕುರಿತು ಎ್ಐಆರ್ ದಾಖಲಾಗಿವೆ. ಈ ಆರೋಪಿಗಳ ವಿರುದ್ಧ ಮನಿ ಲಾಂಡರಿಂಗ್ ಆಕ್ಟ್-2002ರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ನಕಲಿ ಕಂಪನಿ ಸ್ಥಾಪನೆ
ಕರ್ನಾಟಕ, ತಮಿಳುನಾಡು ಸೇರಿ ವಿವಿಧೆಡೆ 24 ನಕಲಿ ಕಂಪನಿಗಳನ್ನು ತೆರೆದಿದ್ದರು. ನಕಲಿ ವಿಳಾಸದಲ್ಲಿ ಕಂಪನಿ ತೆರೆದು ಅದರ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಬ್ಯಾಂಕ್ ಖಾತೆ ತೆರೆದು, ಎಲ್ಲ ಕಂಪನಿಗಳಿಗೂ ಆರೋಪಿಗಳೇ ನಿರ್ದೇಶಕರಾಗಿದ್ದರು ಎಂಬುದು ಗೊತ್ತಾಗಿದೆ. ಎಲ್ಲರೂ ನಕಲಿ ನಿರ್ದೇಶಕರಾಗಿದ್ದು, ಹಾಂಕಾಂಗ್ ಮತ್ತು ಥೈಲ್ಯಾಂಡ್‌ನಲ್ಲಿ ಕಿಂಗ್‌ಪಿನ್‌ಗಳು ಕುಳಿತು ಅಲ್ಲಿಂದಲೇ ನಿರ್ವಹಿಸುತ್ತಿದ್ದರು. ಈ ಎಲ್ಲ ವ್ಯವಹಾರ ಸಿ.ಚರಣ್‌ರಾಜ್ ನೋಡಿಕೊಳ್ಳುತ್ತಿದ್ದ. ಸೈಬರ್ ವಂಚನೆಯಿಂದ ಬರುತ್ತಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ವಿದೇಶಕ್ಕೆ ರವಾನೆ ಮಾಡುತ್ತಿದ್ದರು.
ನಕಲಿ ಸಿಮ್ ಮಾರಾಟ ದಂಧೆ
ಟೆಲಿಗ್ರಾಂ ಗ್ರೂಪ್‌ನಲ್ಲಿ ಅಕ್ರಮವಾಗಿ ಸಿಮ್ ಕಾರ್ಡ್ ಮಾರಾಟಗಾರರನ್ನು ಸಂಪರ್ಕ ಮಾಡಿ ಸಿಮ್ ಆಕ್ಟೀವ್ ಮಾಡಿಸಿ ವಿದೇಶಕ್ಕೆ ರವಾನಿಸುತ್ತಿದ್ದರು. ಈ ಸಿಮ್ ಬಳಸಿ ನಕಲಿ ಕಂಪನಿ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದು ಹಣಕಾಸಿನ ವಹಿವಾಟಿಗೆ ದಾರಿ ಮಾಡಿಕೊಳ್ಳುತ್ತಿದ್ದರು. ಬ್ಯಾಂಕ್‌ಗಳಿಗೂ ನಕಲಿ ದಾಖಲೆ ಸಲ್ಲಿಸಿ ಖಾತೆ ತೆರೆದಿದ್ದು, ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದರು. ವಹಿವಾಟಿನ ಮೇಲೆ ಅನುಮಾನ ಬಾರದಂತೆ ಮಾಡಲು 5 ಲಕ್ಷ ರೂ. ಮಾತ್ರ ವಿತ್ ಡ್ರಾ ಮಾಡುತ್ತಿದ್ದರು. ನಗದನ್ನು ಕ್ರಿಪ್ಟೋ ಕರೆನ್ಸಿಗೆ ಪರಿವರ್ತಿಸಿ ವಿದೇಶದಲ್ಲಿರುವ ಕಿಂಗ್‌ಪಿನ್‌ಗಳಿಗೆ ವರ್ಗಾಯಿಸುತ್ತಿದ್ದರು. ಇದರಿಂದ ಕಮಿಷನ್ ಸಿಗುತ್ತಿತ್ತು.
ನೌಕರಿ ಆಮಿಷವೊಡ್ಡಿ ವಂಚನೆ
ಭಾರತೀಯ ಪ್ರಜೆಗಳಿಗೆ ನೌಕರಿ ಆಮಿಷವೊಡ್ಡಿ ಥಾಯ್ಲೆಂಡ್, ಲಾವೋಸ್ ಮತ್ತು ಮ್ಯಾನ್ಮಾರ್ ಮೂಲಕ ಮಾನವ ಕಳ್ಳ ಸಾಗಣೆ ಮಾಡಲಾಗುತ್ತಿದ್ದೆ. ಬಳಿಕ ಡ್ರಗ್ಸ್ ಮಾಫಿಯಾ, ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಮತ್ತು ಕಾಲ್ ಸೆಂಟರ್‌ಗಳಲ್ಲಿ ದುಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.