ದೇಶಾದ್ಯಂತ ಪಿಎಫ್ಐ ಮುಖಂಡರ ಮನೆ-ಕಚೇರಿ ಮೇಲೆ ಇಡಿ ದಾಳಿ

ed-pfi
Published on

ಬೆಂಗಳೂರು: ದೇಶಾದ್ಯಂತ ಪಿಎಫ್ಐ ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ನಡೆಸಿದೆ.

ಕರ್ನಾಟಕ ಸೇರಿದಂತೆ ಒಟ್ಟು 26 ಕಡೆ ಏಕ ಕಾಲದಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ಪೈಕಿ ಬೆಂಗಳೂರಿನ ಮೂರು ಕಡೆ ದಾಳಿ ಆಗಿದೆ ಎಂದು ಗೊತ್ತಾಗಿದೆ.

ಪಿಎಫ್ಐ ಸಂಘಟನೆಗೆ ವಿದೇಶದಿಂದ ಹಣ ಸಂದಾಯವಾಗುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ರಾಜಸ್ತಾನದ ಪಿಎಫ್ಐ ಮುಖಂಡರ ಮನೆ ಮತ್ತು ಕಚೇರಿ ಮೇಲೆ ಇಡಿ ದಾಳಿ ಮಾಡಿದೆ.

ಹಣದ ಮೂಲದ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಇಡಿ ಅಧಿಕಾರಿಗಳು, ಸಂಘಟನೆಯ ಮುಖಂಡರ ಬ್ಯಾಂಕ್ ಖಾತೆಗಳ ವಿವರ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net