ಒಂದು ದೇಶದಲ್ಲಿ ಊಟ ಇನ್ನೊಂದು ದೇಶದಲ್ಲಿ ನಿದ್ದೆ..ಯಾವುದು ಗೊತ್ತಾ ಈ ವಿಶಿಷ್ಟ ಹಳ್ಳಿ!Longwa

Longwa
Published on

Longwa| ಈ ಜಗತ್ತಿನಲ್ಲಿರುವ ಒಂದೊಂದು ದೇಶವು ಒಂದೊಂದು ಬಗೆಯಲ್ಲಿ ಅಚ್ಚರಿ ಮೂಡಿಸುವಂತಹ ಗುಣಗಳನ್ನು ಹೊಂದಿದೆ. ಜೊತೆಗೆ ಪ್ರಕೃತಿ, ಹವಾಮಾನ ಮತ್ತು ಸಂಸ್ಕೃತಿಯಲ್ಲಿಯೂ ವಿಭಿನ್ನತೆ ಇದೆ. ಹಾಗಾಗಿ ಹೊಸ ಜಾಗಗಳನ್ನು ಸುತ್ತಾಡಲು, ವಿದೇಶಿ ಪ್ರಯಾಣ ಮಾಡಲು ನಮಗೆ ಪಾಸ್‌ಪೋರ್ಟ್ ವೀಸಾ ಬೇಕೇ ಬೇಕು. ಆದರೆ ಇಲ್ಲೊಂದು ಅಚ್ಚರಿ ಮೂಡಿಸುವ ದೇಶವಿದೆ. ಈ ದೇಶದ ಜನರಿಗೆ ಪಾಸ್‌ಪೋರ್ಟ್ ವೀಸಾ ಬೇಕಿಲ್ಲ. ಜೊತೆಗೆ ಅಚ್ಚರಿಯೆನೆಂದರೆ ಇಲ್ಲಿ ಜನರು ಒಂದು ದೇಶದಲ್ಲಿ ಆಹಾರ ತಿಂದು ಇನ್ನೊಂದು ದೇಶಕ್ಕೆ ಮಲಗಲು ಹೋಗುತ್ತಾರೆ. ಹಾಗಾದ್ರೆ ಯಾವುದು ಆ ದೇಶ? ಏನದರ ಸೀಕ್ರೆಟ್ ಗೊತ್ತಾ? ಇಲ್ಲಿದೆ ಡೀಟೆಲ್ಸ್​.

ನೇಪಾಳ ಮತ್ತು ಭೂತಾನ್ ಹೊರತುಪಡಿಸಿ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ಬೇರೆ ಯಾವುದೇ ದೇಶಕ್ಕೆ ಹೋಗುಲು ಸಾಧ್ಯವಿಲ್ಲ. ಆದರೆ ಅದು ತಪ್ಪು, ಜಗತ್ತಿನಲ್ಲಿ ಒಂದು ಹಳ್ಳಿ ಇದೆ. ಅಲ್ಲಿ ಜನರು ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ಸುಲಭವಾಗಿ ಇತರ ದೇಶಗಳಿಗೆ ಪ್ರಯಾಣಿಸಬಹುದು. ಇಲ್ಲಿ ಅಚ್ಚರಿಯ ವಿಷಯವೆಂದರೆ ಈ ಗ್ರಾಮದ ಅರ್ಧದಷ್ಟು ಭಾಗ ಭಾರತದಲ್ಲಿದ್ದು, ಇನ್ನರ್ಧ ಭಾಗ ಮ್ಯಾನ್ಮಾರ್‌ನಲ್ಲಿದೆ. ಇಷ್ಟೇ ಅಲ್ಲ, ಇಲ್ಲಿನ ಜನರ ಹೊಲಗಳು ಮತ್ತು ಮನೆಗಳು ಕೂಡ ಬೇರೆ ಬೇರೆ ದೇಶಗಳಲ್ಲಿವೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಈ ಗ್ರಾಮ ಎಲ್ಲಿದೆ?

ವಿಶ್ವದ ಈ ವಿಶಿಷ್ಟ ಗ್ರಾಮದ ಹೆಸರು ಲಾಂಗ್ವಾ. ಇದು ಮ್ಯಾನ್ಮಾರ್ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಏಕೈಕ ಹಳ್ಳಿಯಾಗಿದೆ. ಇದು ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದಿಂದ 389 ಕಿ.ಮೀ ಈಶಾನ್ಯಕ್ಕೆ ಮಾನ್ ಜಿಲ್ಲೆಯಲ್ಲಿದೆ. ಈ ಹಳ್ಳಿಯ ಸೌಂದರ್ಯ ಅದ್ಭುತ. ಈ ಗ್ರಾಮವು ಮುಖ್ಯವಾಗಿ ಕಾಡುಗಳ ಮಧ್ಯದಲ್ಲಿದ್ದು, ಬುಡಕಟ್ಟು ಸಮುದಾಯಗಳು ವಾಸಿಸುವ ಪ್ರದೇಶದಲ್ಲಿದೆ. ಅದರಲ್ಲಿ ಅರ್ಧದಷ್ಟು ಭಾರತದಲ್ಲಿದೆ ಮತ್ತು ಇನ್ನರ್ಧ ಮ್ಯಾನ್ಮಾರ್‌ನಲ್ಲಿದೆ.

ಒಂದು ದೇಶದಲ್ಲಿ ಊಟ, ಇನ್ನೊಂದು ದೇಶದಲ್ಲಿ ನಿದ್ದೆ:

ಈ ಗ್ರಾಮವು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿರುವುದರಿಂದ ಕೆಲವು ಜನರ ಅಡುಗೆಮನೆ ಭಾರತದಲ್ಲಿದ್ದರೆ, ಮಲಗುವ ಕೋಣೆ ಮ್ಯಾನ್ಮಾರ್‌ನಲ್ಲಿದೆ. ಇದೇ ಕಾರಣಕ್ಕೆ ಜನರು ಭಾರತಕ್ಕೆ ಊಟ ಮಾಡಲು ಬರುತ್ತಾರೆ ಮತ್ತು ಮ್ಯಾನ್ಮಾರ್‌ಗೆ ಮಲಗಲು ಹೋಗುತ್ತಾರೆ. ಗ್ರಾಮವು ಗಡಿಯಲ್ಲಿರುವುದರಿಂದ, ಇಲ್ಲಿನ ಜನರಿಗೆ ತಾಂತ್ರಿಕವಾಗಿ ಎರಡೂ ದೇಶಗಳ ಪೌರತ್ವ ನೀಡಲಾಗಿದೆ. ಆದ್ದರಿಂದ, ಅವರಿಗೆ ಭಾರತಕ್ಕೆ ಮತ್ತು ಭಾರತದಿಂದ ಪ್ರಯಾಣಿಸಲು ಪಾಸ್‌ಪೋರ್ಟ್ ಅಥವಾ ವೀಸಾ ಅಗತ್ಯವಿಲ್ಲ. ಈ ಜನರು ಪಾಸ್‌ಪೋರ್ಟ್ ಅಥವಾ ವೀಸಾ ಇಲ್ಲದೆ ಎರಡೂ ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು.

ಪ್ರಕೃತಿಕ ಸೌಂದರ್ಯ:

ಈ ಹಳ್ಳಿಯ ವಿಶೇಷತೆಯೆಂದರೆ ಅದರ ನೈಸರ್ಗಿಕ ಸೌಂದರ್ಯ. ಇದನ್ನು ನೋಡಿದ ನಂತರ ಜನರು ಅದರ ಬಗ್ಗೆ ಹುಚ್ಚರಾಗುವುದು ಖಂಡಿತ. ದೋಯಾಂಗ್ ನದಿ, ಶಿಲೈ ಸರೋವರ, ಹಾಂಗ್ ಕಾಂಗ್ ಮಾರ್ಕೆಟ್​, ನಾಗಾಲ್ಯಾಂಡ್ ವಿಜ್ಞಾನ ಕೇಂದ್ರ ಮುಂತಾದ ಹಲವು ಪ್ರವಾಸಿ ಸ್ಥಳಗಳು ಇಲ್ಲಿವೆ. ನೀವು ಕೂಡ ಕಾರು ಅಥವಾ ದ್ವಿಚಕ್ರ ವಾಹನದ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net