ಸ್ನಾಯುಗಳ ಬಲಕ್ಕಾಗಿ ಈ ರೀತಿಯ ಆಹಾರಗಳನ್ನು ಸೇವಿಸಿ!! | health tips

untitled-design-2025-08-28t163605369-68b0384aa4cd2
Published on

health tips: ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ಸ್ನಾಯು ಬಲ ಅಧಿಕವಾಗಿ ಬೇಕಾಗಿರುತ್ತದೆ. ಆದರಿಂದ ಸ್ನಾಯು ಬಲವನ್ನು ಹೆಚ್ಚಿಸಲು ಸರಿಯಾದ ಆಹಾರ ಸೇವನೆ, ವ್ಯಾಯಾಮ ಮತ್ತು ಸಂಯೋಜನೆಯಿಂದ ಸ್ನಾಯುಗಳ ಶಕ್ತಿ, ಸಹಿಷ್ಣುತೆ ಮತ್ತು ಬೆಳವಣಿಗೆಯನ್ನು ಸುಧಾರಿಸಬಹುದು. ಹಾಗಾಗಿ ಈ ಕೆಳಗಿನ ಆಹಾರಗಳನ್ನು ಸೇವಿಸುವುದರಿಂದ ಸ್ನಾಯು ಬಲವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ಪ್ರೋಟೀನ್​ ಸಮೃದ್ಧವಾಗಿರುವಂತ ಆಹಾರಗಳಾದ ಮೊಟ್ಟೆ, ಕೋಳಿಮಾಂಸ, ಮೀನು, ತೊಗರಿ ಬೀಜ, ಕಡಲೆಕಾಳು ಬೀನ್ಸ್, ಕ್ಯಾರೇಟ್​, ಬೀಟ್​ರೂಟ್​​ಗಳನ್ನು ಸೇವಿಸುವುದರಿಂದ ಸ್ನಾಯು ಬಲಗೊಳ್ಳಲು ಸಹಾಯುವಾಗುತ್ತದೆ. ಹಾಗೆಯೇ ಈ ಪದಾರ್ಥಗಳು ಸಂಪೂರ್ಣ ಪ್ರೊಟೀನ್​ ಅಮೈನೋ ಆಮ್ಮಗಳನ್ನು ಒದಗಿಸುತ್ತದೆ. ಹಾಗೇಯೇ ಮೀನುಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ. ಇವು ಸ್ನಾಯು ಊತವನ್ನು ಕಡಿಮೆ ಮಾಡುತ್ತದೆ. ಕಾಳುಗಳಲ್ಲಿರುವ ಪ್ರೊಟೀನ್​ಗಳು ಸ್ನಾಯುಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾರ್ಬೋಹೈಡ್ರೇಟ್ ಆಹಾರಗಳಾದ ಓಟ್ಸ್​, ಸಿಹಿಗೆಣಸು, ಬಾಳೆಹಣ್ಣು, ಬಾದಾಮಿ, ವಾಲ್​ನಟ್​ಗಳನ್ನು ಸೇವಿಸುವುದರಿಂದ ಕಾರ್ಬೋಹೈಡ್ರೇಟ್​ಗಳು, ಫೈಬರ್​, ವಿಟಮಿನ್​, ಹಸಿರು ತರಕಾರಿಗಳು, ಪೊಟ್ಯಾಸಿಯಂನಂತಹ ಖನಿಜಗಳನ್ನು ದೇಹಕ್ಕೆ ಒದಗಿಸುತ್ತದೆ. ಹಾಗೆಯೇ ಇವು ಸ್ನಾಯು ದುರಸ್ತಿಗೆ ಬೇಕಾದ ಆಂಟಿ ಆಕ್ಸಿಡೆಂಟ್​ಗಳನ್ನು ಹೊಂದಿರುತ್ತದೆ. ಇವುದಳು ವಿಟಮಿನ್​ ಡಿ ಮತ್ತು ಕ್ಯಾಲ್ಸಿಯಂ ನಂತಹ ಪದಾರ್ಥಗಳನ್ನು ದೇಹಕ್ಕೆ ಒದಗಿಸಿ ಸ್ನಾಯು ಬಲವಾಗಿಡಲು ಸಹಾಯ ಮಾಡುತ್ತದೆ.

ಸ್ನಾಯು ಬಲಕ್ಕಾಗಿ 30 ನಿಮಿಷಗಳ ವ್ಯಾಯಾಮ, ದಿನಕ್ಕೆ 3-4 ಲೀಟರ್​ ನೀರನ್ನು ಕುಡಿಯುವುದು, 7-8 ಗಂಟೆ ನಿದ್ರೆ ಮಾಡುವುದು, ಅಧಿಕ ಒತ್ತಡದಿಂದ ದೂರಾಗಲು ಧ್ಯಾನ, ಯೋಗಗಳನ್ನು ಮಾಡುವುದರಿಂದ ಸ್ನಾಯುಬಲವನ್ನು ಪಡೆಯಬಹುದು.

ಎಚ್ಚರಿಕೆ

* ಆಹಾರ ಸೇವನೆಯನ್ನು ವೈಯಕ್ತಿಕ ಆರೋಗ್ಯ ಸ್ಥಿತಿಗೆ ತಕ್ಕಂತೆ ಮಾಡಬೇಕು. ಅಗತ್ಯವಿದ್ದರೆ ವೈದ್ಯರನ್ನು ಒಮ್ಮೆ ಭೇಟಿ ಮಡಿ ಸೇವಿಸಿ.

* ಅತಿಯಾದ ವ್ಯಾಯಾಮವನ್ನು ತಪ್ಪಿಸಿ, ಏಕೆಂದರೆ ಇದು ಸ್ನಾಯು ಗಾಯಕ್ಕೆ ಕಾರಣವಾಗಬಹುದು.

* ಆಹಾರಗಳು ಮತ್ತು ಸಲಹೆಗಳನ್ನು ಅನುಸರಿಸುವುದರಿಂದ ಸ್ನಾಯುಗಳ ಬಲ, ಆರೋಗ್ಯ ಮತ್ತು ಸಹಿಷ್ಣುತೆಯನ್ನು ಸುಧಾರಿಸಬಹುದು. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net