ಗಣೇಶ ಹಬ್ಬಕ್ಕೆ ಬಾಳೆ ಕಂಬ ತರಲು ಹೋಗಿದ್ದ ಯುವಕ ಸಾವು! ಓರ್ವನ ಸ್ಥಿತಿ ಗಂಭೀರ..Haveri

dead
Published on

Haveri : ಗಣೇಶ ಚತುರ್ಥಿಯ ನಿಮಿತ್ತ ಬಾಳೆ ಕಂಬ ತರಲು ತೋಟಕ್ಕೆ ತೆರಳಿದ್ದ ಯುವಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ಲು ತಾಲೂಕಿನ ಇನಾಂನಿರಲಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಣ್ಣಪ್ಪ ಕ್ಯಾಸನೂರ(27) ಮೃತ ದುದೈವಿˌ ಮಂಜುನಾಥ(23) ಸಿದ್ದಮ್ಮನವರ ಗಾಯಾಳು ಯುವಕ ಎಂದು ತಿಳಿದು ಬಂದಿದೆ.

ಘಟನೆ ಹಿನ್ನಲೆ

ಗಣೇಶ ಹಬ್ಬದ ಸಲುವಾಗಿ ಈ ಇಬ್ಬರು ಯುವಕರು ಜಮೀನಿಗೆ ತೆರಳಿದ್ದು, ಈ ವೇಳೆ ಕಾಡು ಪ್ರಾಣಿಗಳು ಬರದಂತೆ ತಡೆಯಲು ಜಮೀನಿಗೆ ಅಳವಡಿಸಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಹಾನಗಲ್ಲು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Ganapati Puja

ಗಣಪತಿ ವಿಸರ್ಜನೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು

* ಮೊದಲು ಗಣಪತಿ ವಿಸರ್ಜನೆಗೆ ಸರ್ಕಾರದಿಂದ ನಿಗದಿಪಡಿಸಿದ ಸ್ಥಳಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ ನಿಗದಿತ ಕೊಳಗಳು, ಸರೋವರಗಳು ಅಥವಾ ಕೃತಕ ತೊಟ್ಟಿಗಳನ್ನು ಉಪಯೋಗಿಸಿ. ಅಪಾಯಕಾರಿ ನೀರಿನ ಸ್ಥಳಗಳನ್ನು ತಪ್ಪಿಸಿ.

* ಆಳವಾದ ನೀರಿನಲ್ಲಿ ವಿಸರ್ಜನೆ ಮಾಡುವಾಗ ಜೀವರಕ್ಷಕ ಜಾಕೆಟ್ ಧರಿಸಿ

* ತುರ್ತು ಸಂದರ್ಭಗಳಿಗಾಗಿ (ವೈದ್ಯಕೀಯ, ಅಗ್ನಿಶಾಮಕ) ಸಂಪರ್ಕ ಸಂಖ್ಯೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

* ವಿದ್ಯುತ್ ಸಂಪರ್ಕಗಳನ್ನು ಸುರಕ್ಷಿತವಾಗಿ ಇರಿಸಿ, ವಿಶೇಷವಾಗಿ ದೀಪಾಲಂಕಾರದ ಸಂದರ್ಭದಲ್ಲಿ ಆದಷ್ಟು ಜೋಪಾನವಾಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net