ಐರನ್​ ಬಾಕ್ಸ್​ಗೆ ಅಂಟಿದ ಕಲೆಯಿಂದ ಬೇಸತ್ತಿದ್ದೀರಾ? ಅದನ್ನು ತೆಗೆಯುವ ಸರಳ ವಿಧಾನ ಇಲ್ಲಿದೆ ನೋಡಿ... Iron Box

Iron Box
Published on

Iron Box : ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಐರನ್ ಬಾಕ್ಸ್​ಗಳು ಇದ್ದೆ ಇರುತ್ತದೆ. ನಮ್ಮ ಮೈಮೇಲೆ ಹಾಕುವ ಬಟ್ಟೆಗಳು ನೀಟಾಗಿ ಕಾಣಲೆಂದು ಐರನ್ ಬಾಕ್ಸ್​ಗಳನ್ನು ಬಳಸುತ್ತೆವೆ. ಅದರೆ, ಕೆಲವೊಮ್ಮೆ ಅನೇಕ ಮನೆಗಳಲ್ಲಿ ಐರನ್ ಬಾಕ್ಸ್​ನ ತಳಭಾಗದಲ್ಲಿ ಸುಟ್ಟ ಕಲೆಗಳು ಅಥವಾ ಗುರುತಗಳು ಕಂಡುಬರುತ್ತವೆ. ಅದರಿಂದಾಗಿ ಶುಭ್ರವಾದ ಬಟ್ಟೆಗಳ ಮೇಲೆ ಎಲ್ಲಿ ಕಲೆಯಾಗುತ್ತದೆ ಎಂಬ ಭಯದಲ್ಲಿ ಐರನ್ ಬಾಕ್ಸ್​ ಬಳಸುವುದೇ ಇಲ್ಲ. ಸುಟ್ಟ ಕಲೆಗಳು ಒಮ್ಮೆ ಬಂದರೆ ಸಾಕು ಆ ಐರನ್ ಬಾಕ್ಸ್ ಶಾಶ್ವತವಾಗಿ ಹಾಳಾಗಿದೆ ಅನ್ನುವ ಹಾಗೇ ಅದರ ಬಳಕೆಯನ್ನೇ ಬಿಟ್ಟು ಬಿಡುತ್ತಾರೆ.

ಅಂದಹಾಗೆ, ಈ ಕಲೆಗಳನ್ನು ತೆಗೆಯುವುದು ಅಥವಾ ತೊಳೆಯುವುದು ಕಷ್ಟ ಸಾಧ್ಯ ಎಂದು ಭಾವಿಸಿದ್ದೀರಾ? ನೀವು ಆ ರೀತಿ ತಿಳಿದುಕೊಂಡಿದ್ದರೆ ಈಗಲೇ ನಿಮ್ಮ ಮನೆಯಲ್ಲಿ ಇಟ್ಟಿರುವ ಅಂತಹ ಐರನ್ ಬಾಕ್ಸ್​ಗಳನ್ನು ಹೊರಗಡೆ ತೆಗೆದುಕೊಳ್ಳಿ. ಏಕೆಂದರೆ, ಇತ್ತೀಚಿಗೆ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್​ನಲ್ಲಿ ಐರನ್ ಬಾಕ್ಸ್ ಕ್ಲೀನ್ ಮಾಡುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ.

ಇನ್ನೇಕೆ ತಡ ನೀವು ನಿಮ್ಮ ಐರನ್ ಬಾಕ್ಸ್​ನ್ನು ಈ ಕೆಳಗಿನ ವಿಧಾನಗಳನ್ನು ಬಳಸಿ ಕ್ಲೀನ್ ಮಾಡಿ ಹಾಗೂ ಮತ್ತೊಮ್ಮೆ ಬಳಸಿ. ನಿಮ್ಮ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಈ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಇಲ್ಲಿ ಪ್ರಮುಖವಾಗಿ ಎರಡು ವಿಧಾನಗಳನ್ನು ನೀವು ಅನುಸರಿಸಬಹುದು.

ಉಪ್ಪು ಬಳಸಿ ಕ್ಲೀನ್ ಮಾಡುವುದು ( ಅತ್ಯುತ್ತಮ ವಿಧಾನ)

ಮೊದಲಿಗೆ ನಿಮ್ಮ ಐರನ್ ಬಾಕ್ಸ್ ಅನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ನಂತರ ಒಂದು ದಪ್ಪವಾದ ಮದರ್ ಬ್ಲಾಕ್ ತೆಗೆದುಕೊಂಡು ಅದರ ಮೇಲೆ ಉಪ್ಪುಹಾಕಿ ಇಡಬೇಕು. ನಂತರ ಅದರ ಮೇಲೆ ಐರನ್ ಮಾಡಬೇಕು. ಐರನ್ ಮಾಡಿದ ಬಳಿಕ ಅಂಟಿಕೊಂಡಿರುವ ಕಲೆಗಳು ನಿಧಾನವಾಗಿ ಬಿಟ್ಟು ಹೋಗುವುದನ್ನು ನೀವು ನೋಡಬಹುದು.

ಬೇಕಿಂಗ್ ಸೋಡ, ನಿಂಬೆಹಣ್ಣು ಮತ್ತು ವಿನೆಗರ್​ ಬಳಸಿ

ಈ ವಿಧಾನದಲ್ಲಿ ಐರನ್ ಬಾಕ್ಸ್ ಅನ್ನು ಬಿಸಿ ಮಾಡುವ ಅಗತ್ಯ ಇರುವುದಿಲ್ಲ. ಇಲ್ಲಿ ಐರನ್ ಬಾಕ್ಸ್​ನ ಕಲೆಗಳ ಮೇಲೆ ಬೇಕಿಂಗ್ ಸೋಡಾ ಹಾಕಬೇಕು. ಅದರ ಮೇಲೆ ಆರ್ಧ ನಿಂಬೆಹಣ್ಣಿನ ರಸ ಹಾಕಬೇಕು. ಐದು ನಿಮಿಷದ ನಂತರ ಸ್ವಲ್ಪ ವಿನೆಗರ್​ ಹಾಕಿ, ಒಂದು ಸಾಫ್ಟ್ ಸ್ಕ್ರಬ್ಬರ್​ನಿಂದ ಅದನ್ನು ಸ್ವಚ್ಛಗೊಳಿಸಿ. ಆದರೆ ಇಲ್ಲಿ ಎಚ್ಚರಿಕೆಯಿಂದ ಸ್ಕ್ರಬ್ ಮಾಡಬೇಕು. ಇಲ್ಲದ್ದಿದರೆ ಐರನ್ ಬಾಕ್ಸ್​ಗೆ ಸ್ಕ್ರಾಚ್​ ಬರುವ ಸಾಧ್ಯತೆ ಇರುತ್ತದೆ.

ಇಲ್ಲಿ ಎರಡನೇ ವಿಧಾನಕ್ಕಿಂತ ಮೊದಲನೆಯ ವಿಧಾನ ಉತ್ತಮ. ಏಕೆಂದರೆ ಇಲ್ಲಿ ನಿಂಬೆಹಣ್ಣು, ವಿನೆಗರ್​ ಇತ್ಯಾದಿಗಳನ್ನು ಬಳಸಿದರೆ ಐರನ್ ಬಾಕ್ಸ್ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಮೊದಲನೆಯ ವಿಧಾನ ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಅದನ್ನು ಬಳಸಿ. ಇನ್ನೆಂದಿಗೂ ಐರನ್ ಬಾಕ್ಸ್​ನ ಕಲೆಗಳಿಂದ ಹೆದರಬೇಡಿ. ಮನೆಯಲ್ಲಿಯೇ ಇರುವ ಸಾಮಗ್ರಿಗಳನ್ನು ಬಳಸಿಕೊಂಡು ಅದನ್ನು ಹೊಸದಾಗಿಸಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net