ನಿನ್ನ ಹೆಂಡತಿ ಲವರ್​ ನಾನಲ್ಲ ಅಂದ್ರೂ ಬಿಡದೇ ಹಲ್ಲೆ ನಡೆಸಿದ ಪತಿರಾಯ! ವಿಡಿಯೋ ವೈರಲ್​ Youth As Wife Lover

untitled-design-2025-10-14t150951983-68ee1a80b7318
Published on

ಉತ್ತರ ಪ್ರದೇಶ: ವ್ಯಕ್ತಿಯೊಬ್ಬ ಹೋಟೆಲ್​ವೊಂದರಲ್ಲಿ ತನ್ನ ಹೆಂಡತಿಯೊಂದಿಗೆ ಮತ್ತೊಂದು ಯುವಕನನ್ನು ನೋಡಿದ ನಂತರ, ಆತ ಹೆಂಡತಿಯ ಪ್ರೇಮಿ (Youth As Wife Lover) ಇರಬಹುದು ಎಂದು ತಪ್ಪಾಗಿ ಭಾವಿಸಿ ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ಎಂಬಲ್ಲಿ ನಡೆದಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಘಟನೆ ಏನು?

ವರದಿಗಳ ಪ್ರಕಾರ, ವ್ಯಕ್ತಿಗೆ ತನ್ನ ಹೆಂಡತಿ ಪ್ರೇಮಿಯನ್ನು ಭೇಟಿ ಮಾಡಲು ಹೋಟೆಲ್​ಗೆ ಹೋಗಿದ್ದಾಳೆ ಎಂಬ ಸುದ್ದಿ ಬಂದ ನಂತರ ಪತಿ ಆ ಸ್ಥಳಕ್ಕೆ ತಲುಪಿದ್ದಾನೆ. ಇದಾದ ನಂತರ ಅಪರಿಚಿತ ಯುವಕ ಮಹಿಳೆಯೊಂದಿಗೆ ನಿಂತಿರುವುದನ್ನು ಗಮನಿಸಿದ್ದು, ಆತನೇ ಪ್ರೇಮಿ ಇರಬೇಕೆಂದು ಭಾವಿಸಿ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿ ಬಂದಿದೆ.

ಹಲ್ಲೆಯ ವೇಳೆ ಮಗನನ್ನು ರಕ್ಷಿಸಲು ಬಂದ ತಂದೆ ಹಾಗೂ ಸಹೋದರನ ಮೇಲೂ ಈತ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮೂವರು ತೀವ್ರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕ ನೀಡಿದ ದೂರು ಏನು?

ಯಾವುದೋ ಕೆಲಸದ ನಿಮಿತ್ತ ಹೋಟೆಲ್​ಗೆ ಹೋಗಿದ್ದೆ, ಆದರೆ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡು ಕ್ರೂರವಾಗಿ ಹೊಡೆದಿದ್ದಾರೆ. ನನ್ನನ್ನು ರಕ್ಷಿಸಲು ಬಂದ ನನ್ನ ತಂದೆ ಹಾಗೂ ಸಹೋದರನ ಮೇಲೂ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ನನಗೂ ಆತನ ಹೆಂಡತಿಗೂ ಯಾವುದೇ ಸಂಬಂಧವಿಲ್ಲ ಎಂದು ಸಂತ್ರಸ್ತ ಸೋನು ಪ್ರಮೋದ್​ ಆರ್ಯ ಪೊಲೀಸರಿಗೆ ದೂರು ನೀಡಿದ್ದಾನೆ.

ಈ ಪ್ರಕರಣದ ಬಗ್ಗೆ ಮಾತನಾಡಿದ ಮೌರಾನಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ವಿದ್ಯಾಸಾಗರ್ ಸಿಂಗ್ ಯುವಕನ ದೂರಿನ ಆಧಾರದ ಮೇಲೆ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಆರೋಪಿಒಗಳ ವಿರುದ್ಧ ವಿವಿಧ ಭಾಗಗಳ ಅಡಿಯಲ್ಲಿ ಕೇಸು ದಾಖಲಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net