ಮಧುಮೇಹಿಗಳು ಸೀತಾಫಲ ತಿನ್ನಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ ...Custard apple

untitled-design-2025-10-14t155759177-68ee25b82d482
Published on

Custard apple: ಸೀತಾಫಲ ಒಂದು ಪ್ರೊಟೀನ್​ ಸಮೃದ್ಧವಾಗಿರುವಂತಹ ಹಣ್ಣು. ಇದು ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಸಿಗುವಂತಹ ಆಹಾರ. ಇದರ ಸೇವನೆ ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ, ಮಧುಮೇಹಿಗಳು ಈ ಹಣ್ಣನ್ನು ಸೇವಿಸಬಹುದೇ? ಎಂಬ ಪ್ರಶ್ನೆ ಹಲವಾರು ಜನರಲ್ಲಿ ಕಂಡು ಬರುವ ಒಂದು ಸಮಸ್ಯೆಯಾಗಿದೆ.

ಆದಾಗ್ಯೂ, ಕೆಲವು ಆರೋಗ್ಯ ಸಮಸ್ಯೆ ಇರುವಂತಹ ಜನರು ಈ ಹಣ್ಣನ್ನು ಸೇವಿಸಿದಾಗ ಅವರಲ್ಲಿ ದದ್ದು, ತುರಿಕೆ, ಕಜ್ಜಿಯಂತಹ ಸಮಸ್ಯೆಗಳಿಗೆ ಒಳಪಡುತ್ತಾರೆ. ಇಂತಹ ಸಮಸ್ಯೆ ಇರುವಂತಹವರು ಈ ಹಣ್ಣನ್ನು ಸೇವಿಸಬಾರದು. ಆದರೆ ಮಧುಮೇಹಿಗಳು ಯಾವುದೇ ತೊಂದರೆ ಇಲ್ಲದೆ ಹಣ್ಣನ್ನು ಸೇವಿಸಬಹುದು. ಆದರೆ ಮಿತವಾಗಿ ತಿನ್ನಬೇಕು ಎಂದು ವೈದ್ಯರು ತಿಳಿಸುತ್ತಾರೆ.

ಸೀತಾಫಲದಲ್ಲಿ ಉತ್ತಮ ಪೌಷ್ಟಿಕ ಮೌಲ್ಯವಿದ್ದು, 100 ಗ್ರಾಂ ಫಲದಲ್ಲಿ ಸುಮಾರು 25 ಗ್ರಾಂ ಕಾರ್ಬೊಹೈಡ್ರೇಟ್, 2.4 ಗ್ರಾಂ ಫೈಬರ್, 1.7 ಗ್ರಾಂ ಪ್ರೋಟೀನ್, ವಿಟಮಿನ್ C (36 ಮಿ.ಗ್ರಾ.), ವಿಟಮಿನ್ A, B ಕುಟುಂಬ ಮತ್ತು ಪೊಟ್ಯಾಷಿಯಂ ಇರುತ್ತದೆ. ಹಾಗೆಯೇ ಇದರಲ್ಲಿರುವ ಫೈಬರ್​ ಅಂಶವು ರಕ್ತದಲ್ಲಿನ ಗ್ಲೂಕೋಸ್​ ಹೀರುಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದ ಮಧುಮೇಹ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಸೀತಾಫಲ ಸೇವಿಸುವುದರಿಂದಾಗುವ ಪ್ರಯೋಜನಗಳು

* ಮಧುಮೇಹಿಗಳು ಸೀತಾಫಲ ಸೇವಿಸುವುದರಿಂದ ಇದು ರಕ್ರದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ.

* ಸೀತಾಫಲವು ಫೈಬರ್​ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

* ಇದರಲ್ಲಿರುವ ವಿಟಮಿನ್​ C ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಡಯಾಬೆಟಿಸ್​ ಇರುವಂತವರಿಗೆ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹಿಗಳು ಸೀತಾಫಲ ತಿನ್ನುವುದರಿಂದಾಗುವ ಅಪಾಯಗಳೇನು?

* ಸೀತಾಫಲದಲ್ಲಿ ಫ್ರಕ್ಟೋಸ್​ ಹೆಚ್ಚಾಗಿರುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಬಹುದು.

* ಅತಿಯಾಗಿ ಸೀತಾಫಲ ಸೇವಿಸುವುದರಿಂದ ತೂಕ ಹೆಚ್ಚಿಸಿ ಹೃದಯ ಮತ್ತು ಮೂಳೆಗಳ ಮೇಲೆ ಒತ್ತಡ ಹಾಕುತ್ತದೆ.

* ಮಧುಮೇಹ ಔಷಧ ಸೇವಿಸುವವರು ಇದನ್ನು ಸೇವಿಸುವುದರಿಂದ ಔಷಧದ ಪರಿಣಾಮ ಕಡಿಮೆಯಾಗಬಹುದು.

* ಸೀತಾಫಲದ ಬೀಜಗಳನ್ನು ಸೇವಿಸುವುದರಿಂದ ನರವ್ಯವಸ್ಥೆ ಹಾಗೂ ಮೆದುಳಿನ ಕಾರ್ಯವನ್ನು ತೊಡೆದುಹಾಕಬಹುದು.

* ಸೀತಾಫಲ ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆಯನ್ನು ಅನುಭವಿಸಬಹುದು.

ಮಧುಮೇಹ ತಜ್ಞರ ಸಲಹೆಯಂತೆ, ದಿನಕ್ಕೆ ಒಂದು ಸೀತಾಫಲ ತಿನ್ನುವುದು ಒಳ್ಳೆಯದು. ಸೀತಾಫಲ ತಿನ್ನುವ ಮೊದಲು ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸಿಕೊಳ್ಳಿ ನಂತರ ಸೇವಿಸಿ.. ಈ ಹಣ್ಣನ್ನು ಗರ್ಭೀಣಿ ಮಧುಮೇಹಿಗಳು ಸೇವಿಸಬೇಡಿ.. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net