ಈಸ್ಟರ್ ಭಯೋತ್ಪಾದಕ ದಾಳಿ; ಆ.30ರೊಳಗೆ ಸಂಪೂರ್ಣ ಪರಿಹಾರ ಪಾವತಿಸುವಂತೆ ಸಿರಿಸೇನಾಗೆ ಸುಪ್ರೀಂ ಸೂಚನೆ

Untitled-design-2024-07-15T153742.299
Published on

ಕೊಲಂಬೊ: ಈಸ್ಟರ್ ಭಯೋತ್ಪಾದಕ ದಾಳಿ ಸಂತ್ರಸ್ತರಿಗೆ ಆಗಸ್ಟ್​​​ 30ರೊಳಗೆ ಪರಿಹಾರ ಪಾವತಿಯನ್ನು ಪೂರ್ಣಗೊಳಿಸುವಂತೆ ಶ್ರೀಲಂಕಾದ ಸುಪ್ರೀಂಕೋರ್ಟ್ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಆದೇಶಿಸಿದೆ.

ಈಸ್ಟರ್ ದಾಳಿಯ ಸಂತ್ರಸ್ತರಿಗೆ ಪರಿಹಾರವಾಗಿ ಈಗಾಗಲೇ 58 ಮಿಲಿಯನ್​ ರೂ.ಗಳನ್ನು ನೀಡಲಾಗಿದೆ. ಉಳಿಕ ಮೊತ್ತವನ್ನು ಪಾವತಿಸಲು ಆರು ವರ್ಷಗಳ ಕಾಲಾವಕಾಶ ನೀಡುವಂತೆ ಸುಪ್ರೀಂಕೋರ್ಟ್​​ಗೆ ಸಿರಿಸೇನಾ ಮನವಿ ಮಾಡಿದರು. ಈಸ್ಟರ್ ದಾಳಿಯ ಸಂತ್ರಸ್ತರಿಗೆ ಪರಿಹಾರವಾಗಿ ಎಲ್​ಆರ್​ಕೆ 100 ಮಿಲಿಯನ್​​ (2.2 ಕೋಟಿ ರೂ.) ಪರಿಹಾರವಾಗಿ ನೀಡುವಂತೆ ಕೋರ್ಟ್​​ ಸೂಚಿಸಿತ್ತು.

2019ರಲ್ಲಿ ಐಸಿಸ್‌ಗೆ ಸಂಪರ್ಕ ಹೊಂದಿರುವ ಸ್ಥಳೀಯ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪು ನ್ಯಾಷನಲ್ ತೌಹೀದ್ ಜಮಾತ್‌ಗೆ ಸೇರಿದ ಆತ್ಮಹತ್ಯಾ ಬಾಂಬರ್‌ಗಳು ಶ್ರೀಲಂಕಾದ ಮೂರು ಚರ್ಚ್‌ಗಳು ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದಾಗ 11 ಭಾರತೀಯರು ಸೇರಿದಂತೆ 270ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸ್ಫೋಟ ನಡೆಸಿದಾಗ ಚರ್ಚ್​​ಗಳಲ್ಲಿ ಈಸ್ಟರ್ ಭಾನುವಾರ ಆಚರಿಸಲಾಗುತಿತ್ತು. ಸ್ಫೋಟದ ಬಳಿಕ ಜನವರಿ 2023ರಲ್ಲಿ ಸರ್ವೋಚ್ಚ ನ್ಯಾಯಾಲಯವು ಅಂದಿನ ಅಧ್ಯಕ್ಷರಾಗಿದ್ದ ಸಿರಿಸೇನಾ ಮತ್ತು ಅವರ ಪೋಲಿಸ್, ರಕ್ಷಣಾ ಶ್ರೇಣಿಗೆ ಮೂಲಭೂತ ಹಕ್ಕುಗಳ ಅರ್ಜಿಯಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿತು.

ಮಾಜಿ ಅಧ್ಯಕ್ಷ ಸಿರಿಸೇನಾಗೆ 100 ಮಿಲಿಯನ್ ರೂ.ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಮಾಜಿ ಪೊಲೀಸ್ ಮುಖ್ಯಸ್ಥ ಜಯಸುಂದರ ಮತ್ತು ಮಾಜಿ ರಾಜ್ಯ ಗುಪ್ತಚರ ಸೇವೆಗಳ ಮುಖ್ಯಸ್ಥ ಜಯವರ್ಧನೆ ಅವರಿಗೆ ತಲಾ 75 ಮಿಲಿಯನ್ ರೂ., ಮಾಜಿ ರಕ್ಷಣಾ ಕಾರ್ಯದರ್ಶಿ ಫರ್ನಾಂಡೋ 50 ಮಿಲಿಯನ್ ರೂ., ರಾಷ್ಟ್ರೀಯ ಗುಪ್ತಚರ ಸೇವೆಯ ಮಾಜಿ ಮುಖ್ಯಸ್ಥ ಮೆಂಡಿಸ್ ಅವರಿಗೆ ನ್ಯಾಯಾಲಯವು 10 ಮಿಲಿಯನ್ ರೂ., ಈ ಎಲ್ಲಾ ಹಣವನ್ನು ಸಂಗ್ರಹಿಸಿ 2019 ರ ಈಸ್ಟರ್ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡಲು ಬಳಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಪರಿಹಾರ ನೀಡಲು ಗಡುವನ್ನು 2023 ಜುಲೈ 12ಕ್ಕೆ ನಿಗದಿಪಡಿಸಲಾಗಿತ್ತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net