ನೇಪಾಳದ ನೂತನ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಅಭಿನಂದಿಸಿದ ‘ನಮೋ’

blank

ನವದೆಹಲಿ: ನೇಪಾಳದ ಪ್ರಧಾನಿಯಾಗಿ ನೇಮಕಗೊಂಡ ಕೆಪಿ ಶರ್ಮಾ ಒಲಿ ಅವರನ್ನು ಪ್ರಧಾನಿ ಮೋದಿ ಸೋಮವಾರ (ಜುಲೈ 15) ಅಭಿನಂದಿಸಿದ್ದಾರೆ. ಉಭಯ ದೇಶಗಳ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಇದನ್ನು ಓದಿ: ಸಿಬಿಐ ತನಿಖೆ ರದ್ದುಗೊಳಿಸುವಂತೆ ಡಿಕೆಶಿ​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ; ನ್ಯಾಯಾಲಯ ಹೇಳಿದ್ದೇನು?

ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನೇಪಾಳದ ನೂತನ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಅಭಿನಂದಿಸಿದ ‘ನಮೋ’

ಇತ್ತೀಚೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ವಿಶ್ವಾಸಮತ ಪಡೆಯುವಲ್ಲಿ ಮಾಜಿ ಪ್ರಧಾನಿ ಪುಷ್ಪ್ ಕಮಲ್ ದಹಾಲ್ ‘ಪ್ರಚಂಡ’ ಸೋತಿದ್ದಾರೆ. ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾದ ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ ಒಲಿ ಪ್ರಧಾನಿಯಾದರು. ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡವಾದ ಶೀತಲ್ ನಿವಾಸದಲ್ಲಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಒಲಿ ಅವರಿಗೆ ಪ್ರಮಾಣವಚನ ಬೋಧಿಸಿದರು. ಸಾಂವಿಧಾನಿಕ ಆದೇಶದ ಪ್ರಕಾರ ಒಲಿ ಅವರು ಪ್ರಧಾನಿಯಾಗಿ ನೇಮಕಗೊಂಡ 30 ದಿನಗಳಲ್ಲಿ ಸಂಸತ್ತಿನಲ್ಲಿ ವಿಶ್ವಾಸ ಮತವನ್ನು ಕೇಳಬೇಕಾಗುತ್ತದೆ. 275 ಸ್ಥಾನಗಳ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಒಲಿ ಅವರಿಗೆ ಕನಿಷ್ಠ 138 ಮತಗಳ ಅಗತ್ಯವಿದೆ.

ಕೆಪಿ ಶರ್ಮಿ ಒಲಿ ಅವರು 2015ರಲ್ಲಿ ಮೊದಲ ಬಾರಿಗೆ ನೇಪಾಳದ ಕಮಾಂಡ್​​ ಅನ್ನು ವಹಿಸಿಕೊಂಡರು. ಅಕ್ಟೋಬರ್ 12ರಂದು ಅವರು ಮೊದಲ ಬಾರಿಗೆ ನೇಪಾಳದ ಪ್ರಧಾನಿಯಾದರು. 2016 ಆಗಸ್ಟ್ 4ರವರೆಗೆ (297 ದಿನಗಳು) ಅಧಿಕಾರದಲ್ಲಿದ್ದರು. ಇದರ ನಂತರ 2018 ಫೆಬ್ರವರಿ 15ರಂದು ಮತ್ತೊಮ್ಮೆ ನೇಪಾಳದ ಪ್ರಧಾನ ಮಂತ್ರಿಯಾದರು. 2021 ಮೇ 13ರವರೆಗೆ ಈ ಹುದ್ದೆಯಲ್ಲಿದ್ದರು. ಇದಾದ ನಂತರ ಮತ್ತೆ 60 ದಿನಗಳ ಕಾಲ ನೇಪಾಳದ ಪ್ರಧಾನಿಯಾಗಿದ್ದರು. ಈಗ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.(ಏಜೆನ್ಸೀಸ್​​)

ಚುನಾವಣಾ ಪ್ರಚಾರದಲ್ಲಿದ್ದ ಟ್ರಂಪ್​ ಮೇಲೆ ಗುಂಡಿನ ದಾಳಿ; ಜೋಬೈಡನ್​​​, ಬರಾಕ್ ಒಬಾಮಾ ಹೇಳಿದ್ದೇನು?

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…