

ಆಕಾಶದಲ್ಲಿ ಅತಿ ಹೆಚ್ಚು ಎತ್ತರಕ್ಕೆ ಹಾರುವುದೆಂದರೆ ಅದು ಹದ್ದು. ಭೂಮಿಯಲ್ಲಿ ಸಿಂಹ, ನೀರಿನಲ್ಲಿ ಮೊಸಳೆ ಮತ್ತು ಆಕಾಶದಲ್ಲಿ ಹದ್ದಿಗಿಂತ ದೊಡ್ಡ ಬೇಟೆಗಾರರು ಇಲ್ಲ. ಈ ಮೂರು ಪ್ರಾಣಿಗಳು ತಮ್ಮ ಬೇಟೆಗೆ ಬಲಿಯಾಗುವ ಪ್ರಾಣಿಯು ಚೇತರಿಸಿಕೊಳ್ಳದಷ್ಟು ಬಲವಾಗಿ ದಾಳಿ ಮಾಡುತ್ತವೆ. ಹೊಂಚು ಹಾಕಿ ದಾಳಿ ಮಾಡುವುದರಲ್ಲಿ ನಿಸ್ಸಿಮರು. ಅದರಲ್ಲೂ ಹದ್ದು ಅತ್ಯಂತ ಅಪಾಯಕಾರಿ. ಏಕೆಂದರೆ ದೂರದಿಂದಲೇ ತನ್ನ ಬೇಟೆಯ ಮೇಲೆ ಕಣ್ಣಿಡುತ್ತದೆ ಮತ್ತು ಅವಕಾಶ ಸಿಕ್ಕ ತಕ್ಷಣ ಬೇಟೆಯನ್ನು ಹಿಡಿಯುತ್ತದೆ. ಸದ್ಯ ಹದ್ದಿನ ಬೇಟೆಯ ದೃಶ್ಯವಿಡುವ ವಿಡಿಯೋವೊಂದು(Viral Video)
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕುರಿಯು ಬೆಟ್ಟದ ಮೇಲೆ ಮೆಯುತ್ತಿರುತ್ತದೆ. ದೂರದಿಂದ ಹೊಂಚು ಹಾಕಿದ ಹದ್ದು ಕೆಲವೇ ಸೆಕೆಂಡ್ಗಳಲ್ಲಿ ತನ್ನ ಕಾಲುಗಳಿಂದ ಕುರಿಯನ್ನು ಹೊತ್ತೊಯ್ಯುತ್ತದೆ. ಕುರಿಯ ಭಾರಕ್ಕೆ ಬಹುದೂರ ಹೋಗಲು ಸಾಧ್ಯವಾಗುವುದಿಲ್ಲ ಎಂದು ಎನ್ನಿಸಿದರು, ಹದ್ದು ಬಹಳ ದೂರು ಹಾರುವುದನ್ನು ನಾವು ನೋಡಬಹುದು. ಬಳಿಕ ಕುರಿ ಮೇಲಿಂದ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ಕುರಿಯ ಬಳಿಗೆ ಈ ಹದ್ದು ಹೋಗುತ್ತಿದ್ದಂತೆ ಇದನ್ನೆಲ್ಲಾ ನೋಡುತ್ತಿದ್ದ ಮತ್ತೊಂದು ಹದ್ದು ಆ ಸ್ಥಳಕ್ಕೆ ಬರುತ್ತದೆ.
ಬಳಿಕ ಎರಡು ಹದ್ದುಗಳ ನಡುವ ಫೈಟ್ ಆರಂಭವಾಗುತ್ತದೆ. ಪರಸ್ಪರ ಜಗಳದ ನಡುವೆ ಒಂದು ಹದ್ದು ತನ್ನ ಮರಿಗಳಿಗೆ ಆಹಾರ ನೀಡಲು ಹೋಗುತ್ತದೆ. ಮತ್ತೆ ಕುರಿ ಬಿದ್ದ ಸ್ಥಳಕ್ಕೆ ಹೋಗುತ್ತದೆ. ವಿಡಿಯೋ ನೋಡಿದವರಿಗೆ ನೈಜ್ಯತೆಗಿಂತ ಸಿನಿಮಾ ಎನ್ನಿಸುವುದು ಸುಳ್ಳಲ್ಲ. ಆದರೆ ವೈರಲ್ ಆಗಿರುವ ವಿಡಿಯೋ ಕುರಿತ ಸತ್ಯಾಸತ್ಯೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.