

ಪ್ರಾಣಿಗಳು ಮತ್ತು ಪಕ್ಷಿಗಳ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಗೂಬೆಯ ವಿಡಿಯೋ ಇದುವರೆಗೂ ನೋಡಿರುವುದು ತೀರಾ ಕಡಿಮೆ. ಸದ್ಯ ಗೂಬೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ.ಈ ವಿಡಿಯೋ ನಿಜಕ್ಕೂ ಕುತೂಹಲ ಮೂಡಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಗೂಬೆಯನ್ನು ರಕ್ಷಿಸಿದ್ದಾರೆ. ಜತೆಗೆ ಪ್ರೀತಿಯಿಂದ ಮುದ್ದಿಸುತ್ತಿದ್ದಾರೆ. ತನನ್ನು ಮುದ್ದಿಸುತ್ತಿರುವ ವ್ಯಕ್ತಿಗಳನ್ನು ಗೂಬೆ ಹೇಗೆ ನೋಡುತ್ತಿದೆ ಎಂಬುದನ್ನು ಕಾಣಬಹುದಾಗಿದೆ. ಗೂಬೆಯ ರಿಯಾಕ್ಷನ್ ತುಂಬಾ ತಮಾಷೆಯಾಗಿದೆ. ಅದನ್ನು ನೋಡಿದರೆ ನಿಮಗೆ ನಗು ಬರುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ವಿಡಿಯೋ ನೋಡಿದಾಗ ಗೂಬೆಯ ಮೈಂಡ್ ವಾಯ್ಸ್ ಹೀಗೆ ಇರಬಹುದು ಎಂದು ಹೇಳಬಹುದು. ತನ್ನ ಮೇಲೆ ಇಷ್ಟೊಂದು ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ ಎಂಬದನ್ನು ನಂಬಲಾಗದೆ ಜನರನ್ನು ನೋಡುತ್ತಿದೆ ಎಂಬಂತಿದೆ.
ವಿಡಿಯೋ ನೋಡಿ ಅನೇಕರು ತುಂಬಾ ಇಷ್ಟಪಡುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ದೇವರೆ ಈ ಗೂಬೆ ಎಷ್ಟು ದೊಡ್ಡದಾಗಿದೆ, ಇದು ತುಂಬಾ ಮುದ್ದಾಗಿದೆ, ಪ್ರಕೃತಿ ನಿಜವಾಗಿಯೂ ತುಂಬಾ ಸುಂದರವಾಗಿದೆ, ಈ ರೀತಿಯ ಗೂಬೆಗಳು ಸಾಕಷ್ಟು ದುಬಾರಿ, ಅದು ಏಕೆ ಹಾರುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋವನ್ನು ಅಕ್ಟೋಬರ್ 1 ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇದುವರೆಗೂ 13 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.